ಒಂದೇ ರೆಂಬೆಯಲಿ ನೆಲೆಸಿದ ಹಕ್ಕಿಗಳ ಜೋಡಿ
ಮೌನದಲಿ ಮಾತನಾಡುತ್ತಿದೆ, ನೋಡಿ ನೋಡಿ
ಜಗವ ಮರೆತು ಒಂದಾದ ಪ್ರೀತಿಯ ಈ ಪಯಣ
ಕಣ್ಣಂಚಲಿ ಮಿಂಚುತ್ತಿದೆ ಭರವಸೆಯ ಕಿರಣ. ll೦೧ll
ಬದುಕಿನ ಹಾದಿಯಲಿ ಜೊತೆಯಾಗಿ ಹೆಜ್ಜೆ ಇಡುತಾ
ನೋವು-ನಲಿವ ಸಮನಾಗಿ ಹಂಚಿಕೊಳ್ಳುತಾ
ರೆಕ್ಕೆ ಬಿಚ್ಚಿ ಹಾರುವ ಕನಸು ಕಣ್ಣ ತುಂಬ
ಪ್ರೀತಿಯೇ ಇವರ ಬದುಕಿನ ಆಧಾರ ಕಂಬ. ll೦೨ll
ಮುಂಜಾನೆಯ ಹೊಂಬೆಳಕಿನಲಿ ಚಿಲಿಪಿಲಿ ರಾಗ
ಬಾಳ ಹಾದಿಯಲಿ ಭರವಸೆಯ ಹೊಸ ಪರಾಗ
ಬಿರುಗಾಳಿ ಬೀಸಿದರೂ ಅಂಜದ ಈ ಸ್ನೇಹ
ಒಂದಾಗಿ ಬಾಳುವುದೇ ಇವರ ಗುರಿ ಅಹಃ. ll೦೩ll
ಜಗವೇ ಎದುರಾದರೂ ಕೈಬಿಡದ ಈ ಜೊತೆ
ಪ್ರೀತಿಯಲಿ ಹೊಸ ಅರ್ಥ ಹುಡುಕಿದ ಕಥೆ
ಕೊನೆಯವರೆಗೂ ಹಸಿರಾಗಿರಲಿ ಇವರ ಬಂಧ
ಜಗಕೆ ಮಾದರಿಯಾಗಲಿ ಈ ಅಪರೂಪದ ಸಂಬಂಧ. ll೦೪ll
- ರೂಪಾ ಬ. ನಾಟೀಕಾರ ಮುದ್ದೇಬಿಹಾಳ
