ಹೆಣ್ಣಿಗೆ ಸೀರೆಯ ಚಂದ

Shreya Hegde
0


ಸೀರೆ ಭಾರತೀಯ ಸಂಸ್ಕೃತಿಯ ಸೊಬಗನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಉಡುಪು ಆಗಿದೆ ಹೆಣ್ಣಿಗೆ ಸೀರೆ ಅರಿಶಿಣ ಕುಂಕುಮ ತಾಳಿ ಕಾಲುಂಗುರ ತುಂಬಾ ಸುಂದರವಾಗಿ ಕಾಣಿಸುತ್ತದೆ.ಹೆಣ್ಣಿಗೆ ಸೀರೆಯು ವೆಕ್ತಿತ್ವಕ್ಕೆ ಸರಳತೆಯ ಸೊಬಗು ಮತ್ತು ಗೌರವವನ್ನು ನೀಡುವ ಉಡುಪುಗಳಲ್ಲಿ ಸೀರೆಗೆ ವಿಶೇಷ ಸ್ಥಾನವಿದೆ ಸೀರೆ ವೈವಿಧ್ಯಮಯ ಬಣ್ಣ ವಿನ್ಯಾಸ ಮತ್ತು ಹಂಚುಗಳು ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.


ಸೀರೆಯು ಕೇವಲ ಉಡುಪಲ್ಲ ಅದು ನಮ್ಮ ಸಂಸ್ಕೃತಿಯ ಪರಂಪರೆಯ ಸಂಕೇತವು ಹೌದು. ಹಬ್ಬ,ಮದುವೆ,ಜಾತ್ರೆ,ಪೂಜೆ,ಇತರೆ ಶುಭ ಸಮಾರಂಭದಲ್ಲಿ ಧರಿಸುವುದು ಸಾಮಾನ್ಯ. ಕರ್ನಾಟಕದಲ್ಲಿ ಇಲಕಲ್ ಸೀರೆ ಮೈಸೂರು ಸಿಲ್ಕ್ ಸೀರೆ , ಬನಾರಸಿ ಸೀರೆ ಮುಂತಾದ ಪ್ರದೇಶಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಸೀರೆಗಳನ್ನು ಧರಿಸುತ್ತಾರೆ ನಮ್ಮ ನಾಡಿನ ಹೆಮ್ಮೆಯ ಪರಂಪರೆಯನ್ನು ಸಾರುತ್ತಾರೆ.


ಸೀರೆಯು ವಿಶೇಷವಾಗಿ ಒಂದು ಹೆಣ್ಣಿಗೆ ಸೌಂದರ್ಯವನ್ನು ಅಂದವಾಗಿ ತೋರಿಸುತ್ತದೆ ಸೀರೆ ಧರಿಸಿದಾಗ ಹೆಣ್ಣಿನ ಆತ್ಮವಿಶ್ವಾಸ ಮತ್ತು ಸಂಭ್ರಮ ಇನ್ನಷ್ಟು ಹೆಚ್ಚಾಗುತ್ತದೆ ಅಜ್ಜಿ ಅಥವಾ ತಾಯಿ ಧರಿಸಿದ ಸೀರೆಯನ್ನು ಮಗಳು ಅಥವಾ ಮೊಮ್ಮಗಳು ವಿಶೇಷ ಸಂದರ್ಭದಲ್ಲಿ ಧರಿಸುವುದು ಕುಟುಂಬದ ನೆನಪು ಮತ್ತು ಪ್ರೀತಿಯನ್ನು ಉಳಿಸುವ ಸುಂದರ ಪರಂಪರೆಯಾಗಿದೆ ಹೀಗಾಗಿ ಸೀರೆ ಕೇವಲ ಉಡುಪಲ್ಲ ಅದು ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ಸೀರೆ ನಮ್ಮ ಸಂಸ್ಕೃತಿಯ ಅಮೂಲ್ಯ ಕೊಡುಗೆ ಕಾಲಬದಲಾದರೂ ಸೀರೆ ಮೇಲಿನ ಗೌರವ ಮತ್ತು ಪ್ರೀತಿ ಕಡಿಮೆಯಾಗಿಲ್ಲ ಆಧುನಿಕ ಉಡುಪುಗಳ ಜೊತೆಗೆ ಸೀರೆಯು ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ.


- ನೀಲಮ್ಮ  ಬಾಣಕಾರ

ಪತ್ರಿಕೋದ್ಯಮ ವಿಭಾಗ,

 ಬಸವೇಶ್ವರ ಕಲಾ ಮಹಾ

ವಿದ್ಯಾಲಯ ಬಾಗಲಕೋಟೆ




إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top