ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, (ಸ್ವಾಯತ್ತ) ಇದರಜಾಗೃತಿ ಸಮಿತಿ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿ ಘಟಕದ ಜಂಟಿಆಶ್ರಯದಲ್ಲಿ 2026-27ನೇ ಸಾಲಿನ ‘ಜಾಗೃತಿ’ ವಾರ್ಷಿಕ ಸಂಚಿಕೆಯ ಬಿಡುಗಡೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ.ಕೆ.ಎನ್ ಮಾತನಾಡಿ, ಕಥೆ,ಕವನ,ಲೇಖನ ಮುಂತಾದವಿವಿಧಬರಹ ಪ್ರಕಾರಗಳನ್ನು ದಾಖಲಿಸಲು ಈ ವಾರ್ಷಿಕ ಸಂಚಿಕೆಯು ಬಹುದೊಡ್ಡ ಮಾಧ್ಯಮವಾಗಿದೆ.ಇಂದು ಬರಹಗಳನ್ನು ದಾಖಲಿಸಲು ಹಲವಾರು ಮಾಧ್ಯಮಗಳಿವೆ. ಆದರೆ ಪುಸ್ತಕ ರೂಪದಲ್ಲಿದಾಖಲಾದಾಗಅದಕ್ಕೆಇರುವ ಮಾನ್ಯತೆಗೌರವತುಂಬಾದೊಡ್ಡದು. ಒಂದು ಬರಹಕ್ಕೆ ನಮ್ಮ ಜೀವನವನ್ನು ಬದಲಾಯಿಸುವ ಮತ್ತುಇತರರನ್ನು ಬೆಳೆಸುವ ಶಕ್ತಿಯೂಇದೆಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದ, ಚಟುವಟಿಕೆಗಳ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಬರಹಗಳನ್ನು ಹೊತ್ತಂತಹಒಂದುವಾರ್ಷಿಕ ಸಂಚಿಕೆ ‘ಜಾಗೃತಿ’. ಇದು ಸುಂದರವಾಗಿ ಮೂಡಿಬರಬೇಕಾದರೆಅಷ್ಟು ಸುಲಭದ ಕೆಲಸವಲ್ಲ. ಕಾಲೇಜಿನ ಚಟುವಟಿಕೆಗಳನ್ನು ದಾಖಲಿಸಿ ಓದುಗರಿಗೆಉತ್ತಮಅನುಭವ ನೀಡುವಲ್ಲಿಅದರ ಹಿಂದಿನ ಕಷ್ಟಗಳು ಅದರಲ್ಲಿ ತೊಡಗಿಸಿಕೊಂಡವರಿಗೆ ಮಾತ್ರತಿಳಿದಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಮತ್ತುಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಾಗೃತಿವಾರ್ಷಿಕ ಸಂಚಿಕೆಯ ಸಂಪಾದಕಿ,ವಿಶೇಷಅಧಿಕಾರಿ (ಶಿಕ್ಷಕ ಅಭಿವೃದ್ಧಿ) ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆಡಾ. ವಿದ್ಯಾಎಸ್. ಸ್ವಾಗತಿಸಿ, ಸೌರಭ ಪ್ರಸರಂಗದ ನಿರ್ದೇಶಕ,ವಿಶೇಷಅಧಿಕಾರಿ(ಆಡಳಿತ) ಹಾಗೂಕನ್ನಡ ವಿಭಾಗದ ಮುಖ್ಯಸ್ಥಡಾ. ಮನಮೋಹನ ಎಂ ವಂದಿಸಿ, ಬಿಎ ವಿಭಾಗದ ವಿದ್ಯಾರ್ಥಿನಿ ಕೃತಿಕಾ ಕಣಿಯಾರು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
