ಯುಪಿಐ ಗ್ರಾಹಕರಿಗೆ ಉಚಿತ: ಎನ್‍ಪಿಸಿಐ

Shreya Hegde
0


ಮಂಗಳೂರು: ಗ್ರಾಹಕರಿಗೆ ಯುಪಿಐ ಸೇವೆಯು ಉಚಿತವಾಗಿಯೇ ಮುಂದುವರಿಯುತ್ತದೆ. ಗ್ರಾಹಕರಿಂದ ಕಾರ್ಡ್ ಅಥವಾ ಡಿಜಿಟಲ್ ಪಾವತಿಯನ್ನು ಸ್ವೀಕರಿಸುವಾಗ ವ್ಯಾಪಾರಿಗಳು ಪಾವತಿಸುವ ಶುಲ್ಕವಾದ ಎಂಡಿಆರ್ (ಮಚೆರ್ಂಟ್ ಡಿಸ್ಕೌಂಟ್ ರೇಟ್), ಆಯ್ದ ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಜಾರಿಗೆ ಬಂದಿದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಸ್ಪಷ್ಟಪಡಿಸಿದೆ.


ಗ್ರಾಹಕರು ಯುಪಿಐ ಮೂಲಕ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸುವ ಯಾವುದೇ ಮೊತ್ತಕ್ಕೂ ತೆರಿಗೆ ಇರುವುದಿಲ್ಲ ಹಾಗೂ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜತೆಗೆ ಅಂಗಡಿಯಲ್ಲಿ ಶಾಪಿಂಗ್ ಮಾಡುವುದು, ಸ್ಥಳೀಯ ಮಾರುಕಟ್ಟೆಯಲ್ಲಿ ಪಾವತಿಸುವುದು ಅಥವಾ ಬೀದಿ ಬದಿಯ ವ್ಯಾಪಾರಿಯ ಬಳಿ ಯುಪಿಐ ಕೋಡ್ ಸ್ಕ್ಯಾನ್ ಮಾಡುವುದು ಹೀಗೆ ಎಲ್ಲವೂ ಉಚಿತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.


ವ್ಯಾಪಾರಿಗಳು ಯುಪಿಐ ಶುಲ್ಕವನ್ನು ಗ್ರಾಹಕರ ಮೇಲೆ ಹೊರಿಸುವಂತಿಲ್ಲ

ವ್ಯಾಪಾರಿಗಳಿಗೆ ರೂ. 2,000 ವರೆಗಿನ ಎಲ್ಲಾ ಯುಪಿಐ ವ್ಯಾಪಾರಿ ಪಾವತಿಗಳ ಮೇಲೆ ಶುಲ್ಕ ಶೂನ್ಯವಾಗಿರುತ್ತದೆ. ಇದರಿಂದಾಗಿ 96% ರಷ್ಟು ವ್ಯಾಪಾರಿ ವಹಿವಾಟುಗಳು ಉಚಿತವಾಗಿರುತ್ತವೆ. ಬೀದಿ ಬದಿಯ ವ್ಯಾಪಾರಿಗಳು, ನೆರೆಹೊರೆಯ ಅಂಗಡಿಗಳು ಮತ್ತು ಸಣ್ಣ ಉದ್ಯಮಗಳಂತಹ ಸಣ್ಣ ವ್ಯಾಪಾರಿಗಳು, ತಮ್ಮ ಬ್ಯಾಂಕ್ ಖಾತೆಗಳಲ್ಲಿ ಯುಪಿಐ ಕ್ಯೂಆರ್ ಕೋಡ್‍ಗಳ ಮೂಲಕ ತಿಂಗಳಿಗೆ ರೂ. 1 ಲಕ್ಷದವರೆಗೆ ಹಣವನ್ನು ಸ್ವೀಕರಿಸುವಾಗ ಶೂನ್ಯ ಯುಪಿಐ ಸೌಲಭ್ಯ ಪಡೆಯುತ್ತಾರೆ.


ರೂ. 2,000 ಕ್ಕಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳ ಮೇಲೆ 0.4% ಎಂಡಿಆರ್ ಅನ್ವಯಿಸುತ್ತದೆ. ರೂ. 75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ, ಪ್ರತಿ ವಹಿವಾಟಿಗೆ ಎಂಡಿಆರ್ ಗರಿಷ್ಠ ರೂ. 300 ಕ್ಕೆ ಸೀಮಿತವಾಗಿರುತ್ತದೆ. ಇಂಧನ, ಶಿಕ್ಷಣ, ವಿಮೆ, ರೈಲ್ವೆ, ಟೆಲಿಕಾಂ ಮತ್ತು ಯುಟಿಲಿಟಿ ಸೇವೆಗಳು (ವಿದ್ಯುತ್, ನೀರು ಮತ್ತು ಪೈಪ್ಡ್ ನೈಸರ್ಗಿಕ ಅನಿಲ) ಮುಂತಾದವುಗಳಿಗೆ ರೂ. 2,000 ಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ ಪ್ರತಿ ವಹಿವಾಟಿಗೆ ರೂ. 5 ರಷ್ಟು ನಿಗದಿತ ಎಂಡಿಆರ್ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top