ತುಳು ಸಿನಿಮಾಗಳಿಗೆ ಸಬ್ಸಿಡಿ: ಮುಖ್ಯಮಂತ್ರಿಗೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘದಿಂದ ಮನವಿ

Shreya Hegde
0


ಮಂಗಳೂರು: ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕ ತುಳು ಸಿನಿಮಾಗಳ ಕೊಡುಗೆ ಬಹಳಷ್ಟಿದೆ. ತುಳು ಸಿನಿಮಾರಂಗಕ್ಕೆ ಸುಮಾರು 55 ವರ್ಷಗಳ ಇತಿಹಾಸವೂ ಇದೆ. ಈ ವರೆಗೆ ತುಳುವಿನಲ್ಲಿ 150 ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿದೆ. ಜೊತೆಗೆ ರಾಜ್ಯ, ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಕೆಲವು ಸಿನಿಮಾಗಳು ಪಡೆದುಕೊಂಡಿವೆ. ಪ್ರತೀ ವರ್ಷ 15ಕ್ಕೂ ಹೆಚ್ಚು ಸಿನಿಮಾಗಳು ತುಳುವಿನಲ್ಲಿ ತೆರೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಯಲ್ಲಿ ತಯಾರಾಗುವ ಕನಿಷ್ಠ ಹತ್ತು ಸಿನಿಮಾಗಳಿಗೆ ಸಬ್ಸಿಡಿ ನೀಡುವಂತೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್ ಅವರು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.


ಡಿಸೆಂಬರ್ 25 ರಿಂದ 27 ರ ವರೆಗೆ ಮಂಗಳೂರಿನಲ್ಲಿ ಪ್ರಾದೇಶಿಕ ಭಾಷಾ ಅಂತಾರಾಷ್ಟ್ರೀ ಚಲನ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಅದರ ಉದ್ಘಾಟನೆಯನ್ನು ತಾವು ನೆರವೇರಿಸ ಬೇಕೆಂದು ಮನವಿ ಮಾಡಲಾಯಿತು.


ಪ್ರಾದೇಶಿಕ ಚಲನಚಿತ್ರ ನಿರ್ಮಾಪಕರನ್ನು ಸಬ್ಸಿಡಿ ಸಮಿತಿ, ಪ್ರಶಸ್ತಿ ಸಮಿತಿ ಹಾಗೂ ಸೆನ್ಸಾರ್ ಸಮಿತಿಗೆ ಸೇರಿಸಬೇಕೆಂದು ಮನವಿಯಲ್ಲಿ ತಿಳಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top