ತುಳು ಭಾಷೆಗೆ ಅಧಿಕೃತ ಮಾನ್ಯತೆ ದೀರ್ಘ ಕಾಲದ ಕನಸು ನನಸು: ಡಾ ಸದಾನಂದ ಪೆರ್ಲ

Shreya Hegde
0


ಕಲಬುರಗಿ: ತುಳು ಭಾಧೆ ಕರ್ನಾಟದ ಎರಡನೆಯ ಆಧಿಕೃತ ಭಾಷೆಯಾಗಿ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಿರುವುದು ತುಳು ಭಾಷಿಕರ ದೀರ್ಘ ಕಾಲದ ಕನಸಿಗೆ ಸಿಕ್ಕ ಪುರಸ್ಕಾರ ಎಂದು ದಕ್ಷಿಣ ಕಣ್ಣಫ ಸಂಘದ ಮಾಜಿ ಅಧ್ಯಕ್ಷರು ಹಾಗೂ ತುಳು ಬರಹಗಾರ ಡಾ ಸದಾನಂದ ಪೆರ್ಲ ಹರ್ಷ ವ್ಯಕ್ತಪಡಿಸಿದ್ದಾರೆ.


ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಕರ್ನಾಟಕ ಸರಕಾರ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಕಲ್ಯಾಣ ಕರ್ನಾಟಜದ ಸಮಸ್ತ ತುಳು ಭಾಷಿಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ತುಳು ಕೇವಲ ಒಂದು ಭಾಷೆಯಲ್ಲ. ಅದು ತುಳು ನಾಡಿನಜನರ ಅಸ್ಮಿತೆ, ಆತ್ಮಗೌರವ, ಸಂಸ್ಕೃತಿ ಪರಂಪಸರೆ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಶತಮಾನಗಳಿಂದ ಜನರ ನಿತ್ಯ ಜೀವನದಲ್ಲಿಜೀವಂತವಾಗಿರುವ ಭಾಷೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಅಂಗಿಕರಿಸಿ ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸುವಂತೆ ತುಳುವರು ನಡೆಸಿದ ಬೇಡಿಕೆ ಹೋರಾಟಕ್ಕೆ ರಾಜ್ಯ ಸತ್ರಕಾರ ಸ್ಪಂದನೆ ನೀಡಿ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಡಾ ಪೆರ್ಲ ತಿಳಿಸಿದರು.


ತುಳು ಭಾಷೆಯು ಇಂದು ಕೇವಲ ಕರಾವಳಿಗರ ಮಾತೃ ಭಾಷೆಯಾಗಿ ಮಾತ್ರ ಉಳಿದಿಲ್ಲ. ಜಗತ್ತಿನಾದ್ಯಂತ ನೆಲೆಸಿರುವ ಕೋಟಿ ಕೋಟಿ ಸಂಖ್ಯೆಯ ತುಳುವರ ಹೃದಯದ ಭಾಷೆಯಾಗಿದೆ. ಕರಾವಳಿಯಲ್ಲಿ ತುಳು ಭಾಷೆ ಕಲಿಕೆಗೆ ಈಗಾಗಲೇ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು ಭಾಷೆಯ ಸಂಸ್ಕೃತಿಯ ಪರಂಪರೆಯ ಸಮಗ್ರ ಅಧ್ಯಯನಕ್ಕೆ ಸರಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಈಗ ದಾರಿ ಸುಗಮಗೊಂಡಂತಾಗಿದೆ. ಸಣ್ಣ ಸಣ್ಣ ಭಾಷೆಗಳು ಅಳಿಯುತ್ತಿರುವ ಆತಂಕದ ನಡುವೆ ತುಳು ಭಾಷೆಗೆ ಸರಕಾರವು ಅಧಿಕೃತ ಮಾನ್ಯತೆ ನೀಡಿ ಭಾಷಾ ಬೆಳವಣಿಗೆಗೆ ಮತ್ತಷ್ಟು ಬಲ ದೊರೆತಂತಾಗಿದೆ. ತುಳು ಭಾಷಾ ಕಲಿಕೆಗೆ ಸೌಲಭ್ಯ, ತುಳು ಮಾಧ್ಯಮದ ಮೂಲಕ ಶಿಕ್ಷಣ, ತುಳು ಭಾಷೆಯ ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭಾಷೆಯಲ್ಲಿ ಸಂಶೋಧನೆ, ಡಿಜಿಟಲೀಕರಣ, ದಾಖಲೀಕರಣ ಹಾಗೂ ವಿಶ್ವವಿದ್ಯಾಲಯ ಹಂತಕ್ಕೂ ತುಳು ಅಧ್ಯಯನದ ಅವಕಾಶ ಹಾಗೂ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರ್ಪಡೆ ಕಾರ್ಯ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿ ಎಂದು ಡಾ ಸದಾನಂದ ಪೆರ್ಲ ಆಶಯ ವ್ಯಕ್ತಪಡಿಸಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top