ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ರೂ. 2 ಕೋಟಿ ಬೃಹತ್ ದೇಣಿಗೆ ನೀಡಿದ ಉದ್ಯಮಿ ತೋನ್ಸೆ ಆನಂದ್ ಎಂ. ಶೆಟ್ಟಿ

Shreya Hegde
0


ಮಂಗಳೂರು: ಖ್ಯಾತ ಉದ್ಯಮಿ ಹಾಗೂ ಆರ್ಗಾನಿಕ್ ಗ್ರೂಪ್ ಆಫ್ ಸಂಸ್ಥೆಗಳ ಸಿಎಂಡಿ, ಸಾಮಾಜಿಕ ಕಳಕಳಿಯ ದಾನಿ ತೋನ್ಸೆ ಆನಂದ್ ಶೆಟ್ಟಿ ಮುಂಬೈ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜಮುಖಿ ಕಾರ್ಯಗಳಿಗೆ ಭರ್ಜರಿ ಬೆಂಬಲ ಸೂಚಿಸಿದ್ದಾರೆ.


2018ರಲ್ಲಿ ಪ್ರಥಮ ದೇಣಿಗೆಯಾಗಿ ರೂ. 25 ಲಕ್ಷ ನೀಡುವ ಮೂಲಕ ಒಕ್ಕೂಟದ ಕಾರ್ಯಗಳಿಗೆ ಚಾಲನೆ ನೀಡಿದ್ದ ಅವರು, ಕಳೆದ 8 ವರ್ಷಗಳಿಂದ ನಿರಂತರವಾಗಿ ಒಕ್ಕೂಟದ ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಮೂಲಕ ಈಗಾಗಲೇ ಸುಮಾರು ರೂ. 1.65 ಕೋಟಿ ದೇಣಿಗೆಯನ್ನು ಅವರು ಒದಗಿಸಿದ್ದರು.


ಸಂಘದ ಸಭಾಭವನದ ಮುಖ್ಯ ವೇದಿಕೆಗೆ ಅವರ ಧರ್ಮಪತ್ನಿ ತೋನ್ಸೆ ಶಶಿರೇಖಾ ಆನಂದ್ ಶೆಟ್ಟಿ ಅವರ ಹೆಸರನ್ನು ಇರಿಸುವ ಉದ್ದೇಶದಿಂದ, ಇದೀಗ ಬಾಕಿ ಇರುವ ರೂ. 35 ಲಕ್ಷ ಮೊತ್ತದ ಚೆಕ್ಕನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದ್ದಾರೆ. ಇದರೊಂದಿಗೆ ಒಕ್ಕೂಟಕ್ಕೆ ಅವರು ನೀಡಿರುವ ಒಟ್ಟು ದೇಣಿಗೆಯ ಮೊತ್ತ ರೂ. 2 ಕೋಟಿ ತಲುಪಿದೆ.


ಶ್ರೀಮತಿ ಶಶಿರೇಖಾ ಆನಂದ್ ಶೆಟ್ಟಿ ಅವರು ಒಕ್ಕೂಟದ ಎಲ್ಲ ಕಾರ್ಯಕ್ರಮಗಳನ್ನು ಮೆಚ್ಚಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ. ಇವರ ಈ ಉದಾರ ಸೇವೆಗೆ ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ತೋನ್ಸೆ ಆನಂದ್ ಶೆಟ್ಟಿ ಅವರನ್ನು ಹೂಗುಚ್ಚ ನೀಡಿ ಆತ್ಮೀಯವಾಗಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top