ಹುನಗುಂದ : ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಮಾರುತೇಶ್ವರ, ಬಸವೇಶ್ವರ ಹಾಗೂ ಗ್ರಾಮ ದೇವತೆಗಳಿಗೆ ನೀರು ಎರೆಯುವ ಧಾರ್ಮಿಕ ವಿಧಿವಿಧಾನಗಳೊಂದಿಗೆ ದಿನಾಂಕ 12/09/2026 ರ ಶನಿವಾರದಂದು ಗ್ರಾಮದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ ನೀಡಲಾಯಿತು.
ದೇವರಿಗೆ ನೀರೆರೆಯುವ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರಾದ ಸಂಕೇತ ಹೆರಕಲ್ಲ, ವೀರೇಶ್ ಹನುಮಗೌಡ್ರು, ರವಿ ಮುದುಕನಗೌಡ್ರು, ರವಿ ಬೇರಗಿ, ಬಸವರಾಜ ಕೋಣಿ, ಬಸವರಾಜ ಮೂಲಿಮನಿ, ಆನಂದ ಶಿರೋಳ, ವೆಂಕಟೇಶ್ ಮಾಲಿಪಾಟೀಲ್, ಶ್ರೀಕಾಂತ್ ಹದ್ಲಿ, ಶ್ರೀಶೈಲ್ ಹುನೂರ್, ತರುಣ್ ಕುಮಾರ್, ಕೆಂಚನಗೌಡ್, ರಮೇಶ ಹಕ್ಕರಕಾಳ, ಕಾರ್ತಿಕ್ ನಾರಾಯಣಗೌಡ್ರು, ವಿಶ್ವ ಹಡಪದ, ಆದಿತ್ಯ ಮಣ್ಣಿನಾಗರ, ಸಂದೀಪ ತಳವಾರ್, ಅಶೋಕ್ ಮಡಿವಾಳರ, ಕಾರ್ತಿಕ್ ರಂಗನಗೌಡ, ಅಕ್ಷಯ್ ಕೆಂಚನಗೌಡ್ರು, ಶ್ರೀಶೈಲ್ ಮಡಿವಾಳರ್, ಗಣೇಶ್ ಮೂಲಿಮನಿ, ಸಾಗರ್ ತಳವಾರ್, ಸಂದೀಪ್ ತಳಗಡೇ, ಪ್ರೀತಮ್ ದಾದಮಿ, ಆದರ್ಶ ವಂದಾಲ, ಗಣೇಶ್ ವಾಲಿಕಾರ, ವೀರೇಶ್ ತಳವಾರ, ಬಸವರಾಜ ಹಳೂರ, ಮಲ್ಲಿಕಾರ್ಜನ ಹದ್ಲಿ, ಗಣೇಶ್ ನಾಗನೂರ ಸೇರಿದಂತೆ ಊರಿನ ಹಲವಾರು ಯುವಕರು ಹಾಗೂ ಭಕ್ತಾದಿಗಳು ಸಕ್ರಿಯವಾಗಿ ಭಾಗವಹಿಸಿ ಸೇವೆ ಸಲ್ಲಿಸಿದರು.
ಸೆಪ್ಟೆಂಬರ್ 19 ರಿಂದ 21 ರವರೆಗೆ ಮೂಲ ಜಾತ್ರೆ:
ನೀರೆರೆಯುವ ಕಾರ್ಯಕ್ರಮದೊಂದಿಗೆ ಜಾತ್ರೆಯ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದು, ಮುಖ್ಯ ಜಾತ್ರಾ ಮಹೋತ್ಸವವು ಬರುವ ಸೆಪ್ಟೆಂಬರ್ 19, 20 ಮತ್ತು 21 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಈ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ಜಾತ್ರಾ ಕಮಿಟಿ ಹಾಗೂ ಗ್ರಾಮಸ್ಥರು ಕೋರಿದ್ದಾರೆ.
