ಸುರತ್ಕಲ್‌: ಮೀನಾಕ್ಷಿ ಬಾಲವನದ ನವೀಕರಣ, ಉನ್ನತೀಕರಣದ ಉದ್ಘಾಟನೆ

Upayuktha
0


ಸುರತ್ಕಲ್‌:
ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರಿಗಾಗಿ ಇಡ್ಯಾ ಮೀನಾಕ್ಷಿ ಸುಬ್ಬರಾವ್ ರ ಸವಿ ನೆನಪಿನಲ್ಲಿ ಅವರ ಮಕ್ಕಳು ನಿರ್ಮಿಸಿ ಕೊಟ್ಟಿದ್ದ ಮೀನಾಕ್ಷಿ ಬಾಲವನದ ನವೀಕರಣ, ಉನ್ನತೀಕರಣದ ಉದ್ಘಾಟನಾ ಸಮಾರಂಭವು ನಡೆಯಿತು.


ನವೀಕೃತ ಮೀನಾಕ್ಷಿ ಬಾಲವನವನ್ನು ಉದ್ಘಾಟಿಸಿದ ಇಡ್ಯಾ ಮೀನಾಕ್ಷಿ ಸುಬ್ಬರಾವ್ ಟ್ರಸ್ಟ್ ನ ಟ್ರಸ್ಟಿ ಡಾ. ಕರುಣಾಸಾಗರ ಇಡ್ಯಾ ಮಾತನಾಡಿ, ಪುಟಾಣಿಗಳಿಗೆ ಕಲಿಕೆ ಸಂತಸಮಯವಾಗಲು ಬಾಲವನದಂತಹ ಆಕರ್ಷಕ ಸೌಕರ್ಯಗಳು ಬೇಕು. ತಾಯಿ ಮೀನಾಕ್ಷಿಯವರು ಈ ಶಾಲೆಯ ಶಿಕ್ಷಕಿಯಾಗಿದ್ದಾಗಿನ ಸಂದರ್ಭದಲ್ಲಿ ತಾನು ವಿದ್ಯಾರ್ಥಿಯಾಗಿದ್ದ ಸವಿ ನೆನಪುಗಳನ್ನು ಹಂಚಿಕೊಂಡರು.


ಇಂದ್ರಾಣಿ ಕರುಣ ಸಾಗರ್ ಪ್ರಾಥಮಿಕ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ನೀಡುವ ಕೊಡುಗೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಸಂಭ್ರಮವನ್ನು ಹೆಚ್ಚಿಸುತ್ತದೆ ಎಂದರು. ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು.


ಶಾಲಾ ಸಂಚಾಲಕಿ ಪಿ. ಕಸ್ತೂರಿ ಬಾಲವನದ ಕೊಡುಗೆಗೆ ಧನ್ಯವಾದ ಸಲ್ಲಿಸಿದರು. ಐ. ಉಮಾದೇವಿ ಕೃಷ್ಣ ಭಟ್, ಪ್ರಕಾಶ್ ಹೆಬ್ಬಾರ್, ಸುಜಾತ ಪಿ. ಹೆಬ್ಬಾರ್, ಸುಗುಣ ರಾಘವೇಂದ್ರ ಇಡ್ಯಾ, ಹಿಂದು ವಿದ್ಯಾದಾಯಿನಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕೆ., ಕಾರ್ಯದರ್ಶಿ ಶ್ರೀರಂಗ ಹೆಚ್., ಸದಸ್ಯ ಪ್ರಸಿದ್ದ, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವಿಶ್ವರಾಜ್, ಮುಖ್ಯ ಶಿಕ್ಷಕ ಡಾ. ಶಶಿಕುಮಾರ್, ವಿದ್ಯಾದಾಯಿನೀ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತ, ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷೆ ಮಲ್ಲಿಕ ಮತ್ತು ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top