ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ “ಡೈಮಂಡ್ ಫೆಸ್ಟ್” – ವಜ್ರಾಭರಣ ಪ್ರಿಯರಿಗೆ ವಿಶೇಷ ಆಕರ್ಷಕ ಕೊಡುಗೆ

Upayuktha
0


ಪುತ್ತೂರು: ದಶಕಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ವಜ್ರಾಭರಣ ಪ್ರಿಯರಿಗಾಗಿ ವಿಶೇಷ “Diamond Fest” ಆಯೋಜಿಸಲಾಗಿದೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಈ ವಿಶೇಷ ಉತ್ಸವದಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ವಿಶಿಷ್ಟ ಹಾಗೂ ಆಕರ್ಷಕ ವಿನ್ಯಾಸಗಳೊಂದಿಗೆ ವಿಶೇಷ ವಿನಿಮಯ ಮತ್ತು ಬೈಬ್ಯಾಕ್ ಸೌಲಭ್ಯಗಳನ್ನು ಪಡೆಯುವ ಅವಕಾಶವಿದೆ.


“Diamond for Everyone” ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗಿರುವ ಡೈಮಂಡ್ ಫೆಸ್ಟ್‌ನಲ್ಲಿ, ಗ್ರಾಹಕರ ವೈಯಕ್ತಿಕ ಶೈಲಿ ಹಾಗೂ ವಿವಿಧ ಸಂದರ್ಭಗಳಿಗೆ ಹೊಂದುವಂತಹ ಆಕರ್ಷಕ ವಜ್ರಾಭರಣಗಳ ಸಂಗ್ರಹವನ್ನು ಪರಿಚಯಿಸಲಾಗುತ್ತಿದೆ. Amulya Diamonds ಹಾಗೂ KISNA Diamond & Gold Jewellery ಸೇರಿದಂತೆ ವೈವಿಧ್ಯಮಯ ವಜ್ರಾಭರಣಗಳ ಆಯ್ಕೆಯನ್ನು ಗ್ರಾಹಕರು ಇಲ್ಲಿ ಪಡೆಯಬಹುದು.


ವಜ್ರಾಭರಣಗಳ ಮೇಲೆ ವಿಶೇಷ ಪ್ರಯೋಜನಗಳು


ಈ ಡೈಮಂಡ್ ಫೆಸ್ಟ್‌ನ ಪ್ರಮುಖ ಆಕರ್ಷಣೆಯಾಗಿ ವಜ್ರಾಭರಣಗಳ ಎಕ್ಸ್ಚೇಂಜ್ 95% ವರೆಗೆ ಮೌಲ್ಯ ಹಾಗೂ ಬೈಬ್ಯಾಕ್‌ಗೆ 90% ವರೆಗೆ ಮೌಲ್ಯ ನೀಡಲಾಗುತ್ತಿದೆ. ಹಳೆಯ ವಜ್ರಾಭರಣಗಳನ್ನು ಬದಲಾಯಿಸಿ ಹೊಸ ವಿನ್ಯಾಸಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದು ವಿಶೇಷ ಅವಕಾಶವಾಗಲಿದೆ.


ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಶುದ್ಧತೆ, ಪಾರದರ್ಶಕತೆ ಹಾಗೂ ಗ್ರಾಹಕ ವಿಶ್ವಾಸದ ಪರಂಪರೆಯನ್ನು ಮುಂದುವರಿಸಿಕೊಂಡು, ವಜ್ರಾಭರಣ ಖರೀದಿಯನ್ನು ಇನ್ನಷ್ಟು ಸುಲಭ ಹಾಗೂ ಮೌಲ್ಯಯುತವಾಗಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿದೆ.


ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪ ಹಾಗೂ ಬೆಂಗಳೂರಿನ ಮುಳಿಯ ಶೋರೂಂಗಳಲ್ಲಿ ಗ್ರಾಹಕರು ಈ ವಿಶೇಷ ಡೈಮಂಡ್ ಫೆಸ್ಟ್‌ನ ಪ್ರಯೋಜನ ಪಡೆದುಕೊಳ್ಳಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top