ಕಬ್ಬಡಿ ಪಂದ್ಯಾಟ: ಫಿಲೋಮಿನಾ ಪ.ಪೂ. ಕಾಲೇಜು ಬಾಲಕಿಯರ ತಂಡ ದ್ವಿತೀಯ

Upayuktha
0



ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ ಜಿಲ್ಲೆ, ಮಂಗಳೂರು ಹಾಗೂ ಸರಕಾರಿ ಪ.ಪೂ ಕಾಲೇಜು ಕಬಕ ಇದರ ಜಂಟಿ  ಆಶ್ರಯದಲ್ಲಿ ಸೆಪ್ಟೆಂಬರ್ 11 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಕಬ್ಬಡಿ  ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಬಾಲಕಿಯರ ವಿಭಾಗವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಪ್ರಥಮ ವಿಜ್ಞಾನ ವಿಭಾಗದ ಎನ್ ವಿಜೇತಾ ಕುಲಾಲ್, ಬೆಸ್ಟ್ ರೈಡರ್ ಆಗಿ ಹೊರಹೊಮ್ಮಿದ್ದಾರೆ. ಉಳಿದಂತೆ ಪಂದ್ಯಾಟದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಶ್ರೀನಿಧಿ ಬಿಲ್ಲವ, ಮೋಕ್ಷಾ, ಪಯಸ್ವಿನಿ ಎ. ಪಿ ದ್ವಿತೀಯ ವಿಜ್ಞಾನ ವಿಭಾಗದ ಪ್ರತೀಕ್ಷಾ ಡಿ. ಯು, ಅಮಿಶಾ ಮೋಹನ್, ಏಂಜೆಲ್. ಜೆ, ಸುಪ್ರಿಯಾ. ಎಸ್, ಅಕ್ಷರ ಎಂ.ಎಸ್, ಪ್ರಥಮ ವಿಜ್ಞಾನ ವಿಭಾಗದ ಎನ್. ವಿಜೇತಾ ಕುಲಾಲ್, ರಿಷಿಕಾ. ಎ ಪ್ರಥಮ ವಾಣಿಜ್ಯ ವಿಭಾಗದ  ನಿಷಿತಾ ಹಾಗೂ ದ್ವಿತೀಯ ಕಲಾ ವಿಭಾಗದ ಸ್ವಸ್ತಿ ಎಚ್ ಆಚಾರ್ಯ ಭಾಗವಹಿಸಿದ್ದರು.


ಇವರಿಗೆ ಮಹಮದ್ ಅಬೀಬ್ ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ   ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top