ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

Upayuktha
0

 


ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಮತ್ತು ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹುಡುಗರ ವಿಭಾಗದಲ್ಲಿ 05 ಚಿನ್ನ ಪದಕದೊಂದಿಗೆ  ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲಿ 05 ಚಿನ್ನ, 01 ಬೆಳ್ಳಿ ಹಾಗೂ 01 ಕಂಚು ಒಟ್ಟು 07 ಪದಕದೊಂದಿಗೆ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡರು.  ಆ ಮೂಲಕ ಎರಡು ವಿಭಾಗದಲ್ಲಿ ಅವಳಿ ಸಮಗ್ರ ಪ್ರಶಸ್ತಿ ಲಭಿಸಿತು.


ಹುಡುಗರ ವಿಭಾಗದಲ್ಲಿ : 60 ಕೆಜಿ – ಸಂತೋಷ್ (ಪ್ರಥಮ), 71 ಕೆಜಿ – ಪ್ರಫುಲ್ (ಪ್ರಥಮ), 79 ಕೆಜಿ - ಪ್ರಜ್ವಲ್ (ಪ್ರಥಮ), 88 ಕೆಜಿ - ಶ್ರೇಯಸ್ (ಪ್ರಥಮ), 110 ಕೆಜಿ – ಜೇಷ್ಠ (ಪ್ರಥಮ)


ಹುಡುಗಿಯರ ವಿಭಾಗದಲ್ಲಿ : 48 ಕೆಜಿ – ಸಂಜನಾ (ಪ್ರಥಮ), 53 ಕೆಜಿ – ಸೌಮ್ಯ (ಪ್ರಥಮ),  58 ಕೆಜಿ – ಮೈತ್ರಿ (ಪ್ರಥಮ), 63 ಕೆಜಿ – ಅಪೂರ್ವ (ಪ್ರಥಮ), 69 ಕೆಜಿ – ಲಹರಿ (ದ್ವಿತೀಯ), 77 ಕೆಜಿ - ಪಾವನಿ (ಪ್ರಥಮ), 86 ಕೆಜಿ – ಅಶ್ವಿನಿ (ಪ್ರಥಮ), +86 ಕೆಜಿ - ಸಾಧನ (ತೃತೀಯ), ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top