ಅಲೋಶಿಯಸ್ ವಿವಿಯ ಮೊಹಮ್ಮದ್ ಸಿರಾಜ್ ಬಿ. ಅವರಿಗೆ ಪಿಎಚ್.ಡಿ ಪದವಿ

Upayuktha
0

 


ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI & ML) ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಇನ್‌ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ (IIC) ಅಧ್ಯಕ್ಷರಾದ ಮೊಹಮ್ಮದ್ ಸಿರಾಜ್ ಬಿ. ಅವರ “ಪ್ಯಾರಲಲ್ ಡೀಪ್ ಕನ್ವಲ್ಯೂಷನಲ್ ನ್ಯೂರಲ್ ನೆಟ್‌ವರ್ಕ್ ಬೇಸ್ಡ್ ಮೈನಿಂಗ್ ಆಫ್ ಅಗ್ರಿಕಲ್ಚರಲ್ ಡೇಟಾ ಫಾರ್ ಕ್ವಾಲಿಟಿ ಜಡ್ಜ್‌ಮೆಂಟ್ ಅಂಡ್ ಐಡೆಂಟಿಫಿಕೇಷನ್ ಆಫ್ ಡಿಫೆಕ್ಟ್ಸ್ ಇನ್ ಪ್ಲಾಂಟ್ಸ್” ಎಂಬ ಮಹಾಪ್ರಬಂಧಕ್ಕಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.


ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸಂಯೋಜಿತ ಸಂಸ್ಥೆಯಾದ ಮಂಗಳೂರಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ಝಾಹಿದ್ ಅಹ್ಮದ್ ಅನ್ಸಾರಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಇವರು ಯುಜಿಸಿಯ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ (JRF & SRF) ಪಡೆದು ಸಂಶೋಧನೆ ನಡೆಸಿದ್ದಾರೆ.


ಸಿರಾಜ್ ಅವರು ಅಹಮ್ಮದ್ ಹಾಜಿ ಮತ್ತು ಆಯಿಷಾ ಹಜ್ಜುಮ್ಮ ದಂಪತಿಯ ಪುತ್ರ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top