ಅಲೋಶಿಯಸ್ ವಿವಿಗೆ ಕರ್ನಾಟಕ ಸರಕಾರದ ಸಂಶೋಧನಾ ಅನುದಾನ

Shreya Hegde
0


ಮಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ (VGST) ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ, ಕರ್ನಾಟಕ ಸರಕಾರ, ವತಿಯಿಂದ 2026-27ನೇ ಸಾಲಿನ ವಿಜ್ಞಾನ ಸಂಶೋಧನೆಗೆ ನೀಡಲಾಗುವ ಸಹಾಯಧನವು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲೈಫ್ ಸೈನ್ಸ್‍ನ ಬಯೋಕೆಮಿಸ್ಟ್ರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರೆಮ್ಯಾ ವರದರಾಜನ್ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸನಾ ಶೇಖ್ ಅವರ “Establishment of an Institutional Facility for Nano-Bio- Environmental Research and Training (NBERT-AN): Biotechnological valorization of Areca Nut Waste for Safe Nano-Nutraceuticals” ಎಂಬ ವಿಷಯದ ಸಂಶೋಧನಾ ಪ್ರಸ್ತಾಪಕ್ಕೆ ರೂ. 20,00,000/- ಅನುದಾನ ಮಂಜೂರಾಗಿದ್ದು, ಅದನ್ನು ಮುಂದಿನ ಎರಡು ವರ್ಷಗಳ ಕಾಲ ವಿವಿಯಲ್ಲಿ ಸಂಶೋಧನಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುವುದು.


 ಕಾಲೇಜಿನ ಆಡಳಿತ ಮಂಡಳಿ, ಕುಲಪತಿಗಳು ಹಾಗೂ ವಿವಿಯ ಸಂಶೋಧನಾ ಘಟಕವು ಈ ಸಂಶೋಧನಾ ಅನುದಾನವನ್ನು ಪಡೆದ ಡಾ. ರೆಮ್ಯಾ ವರದರಾಜನ್ ಹಾಗೂ ಡಾ. ಸನಾ ಶೇಖ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top