ಸ್ಫೂರ್ತಿ ಸೆಲೆ: ಜೀವವೆಂಬ ಚದುರಂಗದಲ್ಲಿ

Upayuktha
0

 


ಹಲೋ 

ಹೇಗಿದ್ದೀರಾ?

ನಮ್ಮ ಜೀವನವೆಂಬುದು ಒಂದು ವಿಲಕ್ಷಣ ಸಂಗತಿ. ಜೀವನದಲ್ಲಿ ನಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲದೆಯೋ ಎಷ್ಟೋ ಆಟಗಳನ್ನು ಆಡಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ   ಚದುರಂಗದ. ದಾಳ ಆಗಿ ಬಿಟ್ಟಿರುತ್ತೇವೆ. 


ಮಹಾಭಾರತದಲ್ಲಿ ಯುಧಿಷ್ಠಿರ ಪಗಡೆಯಾಟದಲ್ಲಿ ಸೋತು ವನವಾಸ ಅನುಭವಿಸಿದ ಸಂಗತಿ ಗೊತ್ತೇ ಇದೆ.ಆದರೆ ನಾವು ಕೂಡ ಚದುರಂಗದ ಒಂದು ಭಾಗವಾಗಿ   ರೂಪು ಗೊಂಡಿರುತ್ತೇವೆ.


ಕೆಲವೊಂದು ಸಾರೆ ನಾವು ಇನ್ನೊಬ್ಬರನ್ನು ದಾಳವಾಗಿ ಬಳಸಿದರೆ, ಎಷ್ಟೋ ಸಲ  ಜನ ನಮ್ಮನ್ನು ದಾಳವಾಗಿ ಬಳಸುತ್ತಾರೆ.


ನಮ್ಮ ಪ್ರತಿಭೆ, ಕೌಶಲ್ಯ, ಬುದ್ಧಿಮತ್ತೆ ನಮ್ಮ  ಕುದುರೆ,ಆನೆ. ಸೈನಿಕರಿದ್ದಂತೆ.ನಾವು ಎಷ್ಟೇ ಚೆನ್ನಾಗಿ ದಾಳ ಉರುಳಿಸಿದರೂ ನಮಗೇ ಚೆಕ್ ಮೇಟ್ ಕೊಡುವವರು ಇದ್ದೇ ಇರುತ್ತಾರೆ.


ಹಿಂದಿಯಲ್ಲಿ  ಓದಿದ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ. ಶತರಂಜ್  ಖೇಲ ನಾ ಮುಜೆ  ನಹಿ ಆತಾ ಹೈ. ಮೈ ರಿಷ್ಟೇ ನಿಭಾರಹಿ ತೆ.  ವೊ ದಾವ್ ಪರ್ ಖೇಲ್ ರಹತಾ.


ಚದುರಂಗ ಗೊತ್ತಿಲ್ಲದ ನಾನು ಸಂಬಂಧಗಳನ್ನು ನಿಭಾಯಿಸುತ್ತಿದ್ದ ರೇ, ಅವರು ಚದುರಂಗದಲ್ಲಿ ನನ್ನನ್ನು ದಾಳವನ್ನಾಗಿ ಉಪಯೋಗಿಸಿ ನನ್ನನ್ನೇ ಸೋಲಿಸಲು ಓಡಾಡುತ್ತಿದ್ದರು ಎನ್ನುವುದು ತುಂಬ ಅರ್ಥಗರ್ಭಿತವಾದ ಸಾಲುಗಳು.


ಇಲ್ಲಿ ಕೆಲವೊಂದು ಸಾರಿ ಎದುರಾಳಿಗಳನ್ನು ಸೋಲಿಸಲು, ರಕ್ಷಣೆಯ ತಂತ್ರದ ಜೊತೆಗೆ ಆಕ್ರಮಣಕಾರಿಯಾಗಿ ಆಡ ಬೇಕಾಗುತ್ತದೆ.


ಆದರೆ ನಮ್ಮ. ಆಟವನ್ನು ಚೆನ್ನಾಗಿ ಆಡಿದರೆ ಸಾಕಲ್ಲವೇ.


ಬನ್ನಿ, ಜೀವನವೆಂಬ ಚದುರಂಗದಲ್ಲಿ ಹುಷಾರಾಗಿ ಆಡೋಣ.


-ಗಾಯತ್ರಿ ಸುಂಕದ, ಬದಾಮಿ

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top