ಮಂಗಳೂರು: ನಗರದ ಶಿವಳ್ಳಿ ಸ್ಪಂದನ (ರಿ.) ಸಂಸ್ಥೆಯ ಮಹಾಸಭೆಯು ದಿನಾಂಕ 30/08/2026 ರಂದು ಯಶಸ್ವಿಯಾಗಿ ನೆರವೇರಿತು. ಈ ಸಭೆಯಲ್ಲಿ 2026-2028 ರ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಜರುಗಿದ್ದು, ಸಂಸ್ಥೆಯ ಹೊಸ ಅಧ್ಯಕ್ಷರಾಗಿ ಕೆ. ಕೃಷ್ಣ ಭಟ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉಪಾಧ್ಯಕ್ಷರುಗಳಾಗಿ ಶ್ರೀನಿವಾಸ ಆಚಾರ್ಯ ಅಳಪೆ ಹಾಗೂ ಭಾಸ್ಕರ ಭಟ್ ಆಯ್ಕೆಯಾಗಿದ್ದರೆ, ಕಾರ್ಯದರ್ಶಿಯಾಗಿ ಬಿ. ರಮಾಮಣಿ ಅವರು ನಿಯೋಜನೆಗೊಂಡಿದ್ದಾರೆ. ಜೊತೆ ಕಾರ್ಯದರ್ಶಿಗಳಾಗಿ ದಿನೇಶ್ ಭಟ್ ಹಾಗೂ ಭರತ್ ಬಿ. ರಾವ್ ಮತ್ತು ಖಜಾಂಚಿಯಾಗಿ ರಘುರಾಮರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರುಗಳಾಗಿ ಸಂಪತ್ ಕುಮಾರ್, ಡಾ. ಅಶೋಕ್ ಕುಮಾರ್ ಎಂ.ಆರ್. ಹಾಗೂ ಪ್ರಶಾಂತ್ ರಾವ್ ಅವರು ಆಯ್ಕೆಯಾಗಿದ್ದು, ನಿಕಟಪೂರ್ವ ಅಧ್ಯಕ್ಷರಾದ ವಾಸುದೇವ ಭಟ್ ಅವರು ಆಡಳಿತ ಮಂಡಳಿಯಲ್ಲಿ ತಮ್ಮ ಸೇವೆಯನ್ನು ಮುಂದುವರಿಸಲಿದ್ದಾರೆ.
ಸಂಸ್ಥೆಯ ಈ ಬಾರಿಯ ಚುನಾವಣಾ ಅಧಿಕಾರಿಯಾಗಿ ವಕೀಲರಾದ ರವಿಪ್ರಸನ್ನ ಸಿ. ಕೆ. ಅವರು ಕರ್ತವ್ಯ ನಿರ್ವಹಿಸಿ, ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

