ಕವನ: ಕರ್ಮಸಾರಥಿ

Upayuktha
0



ಜೀವನ ಸಾರ ಸಾರಿದ ಸಾರಥಿ 

ಬದುಕ ಪಾಠ ತಿಳಿಸಿದ ಮಹಾರಥಿ 

ರಾಧೇಯ ಮನದಲ್ಲಿ ನೆಲೆಸಿದ ಅತಿರಥಿ

ಜನಿಸಿದ ಪುಣ್ಯದಿನ ಅಷ್ಟಮಿ ತಿಥಿ 


ದೇವಕಿ ಬಸಿರಲಿ ಜನಿಸಿದ ನಂದನ 

ಯಶೋದೆಯನ್ನು ತಾಯಿ ಎಂದ

ಗೋಕುಲದಲ್ಲಿ ಯದುನಂದನ

ಕಳೆದನು ಬಾಲ್ಯದ ದಿನಗಳ ಚಂದ


ಹೆಜ್ಜೆ- ಹೆಜ್ಜೆಗೂ ತೋರಿದನು ಮಾಯೆ

ಧರ್ಮವು ನಲಿಯುತಲಿ ನೆಲೆಯಾಗಲೆಂದು 

ಸರ್ವರ ಮನದಲಿ ಕೃಷ್ಣನ ಛಾಯೆ 

ಮೂಡಿತು ಕರ್ಮ ಮಾರ್ಗವೆಂದು 


ಲೋಕವೇ ದೇವರೆಂದು ಕರೆಯಲು

ತಿಳಿಸಿದ ಕರ್ಮಫಲ ಯಾರನ್ನು ಬಿಡದೆಂದನು 

ಜಗತ್ತು ಜಗನಾಥನೆಂದು ಕರೆಯಲು 

ವಿಧಿ ನಿಯಮ ತನಗೆ ಹೊರತಾಗಿಲ್ಲ ಎಂದನು 


- ಪ್ರಿಯಾ ಶ್ರೀವಿಧಿ,

ಪತ್ರಿಕೋದ್ಯಮ ವಿದ್ಯಾರ್ಥಿನಿ,

ವಿವೇಕಾನಂದ ಮಹಾವಿದ್ಯಾಲಯ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top