ವಿಜೃಂಭಣೆಯಿಂದ ಜರುಗಿದ ಶ್ರೀ ಸಂಗಮೇಶ್ವರ ರಥೋತ್ಸವ

Upayuktha
0

ಹುನಗುಂದ: ಶ್ರಾವಣ ಮಾಸದ ಕೊನೆಯ ಸೋಮವಾರದಂದು ಹುನಗುಂದ ಪಟ್ಟಣದ ಶ್ರೀ ಸಂಗಮೇಶ್ವರ ರಥೋತ್ಸವ ನಾಡಿನ ಶರಣ, ಸಂತ, ಮಠಾಧೀಶರ, ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ಜರಗಿತು. ಮಧ್ಯಾಹ್ನ ಲಿಂಗದಕಟ್ಟೆಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಕಳಸದ ಮೆರವಣಿಗೆ ನಡೆದು ಸಾಯಂಕಾಲ 6-30 ಗಂಟೆಗೆ ಸಂಗಮೇಶ್ವರ ದೇವಸ್ಥಾನ ತಲುಪಿತು. 


ಮಾರ್ಗದುದ್ದಕ್ಕೂ ಕಳಸಕ್ಕೆ ವಿಶೇಷ ಪೂಜೆ ಭಕ್ತರಿಂದ ನೆರವೇರಿತು. ಸರಿಯಾಗಿ ಸಾಯಂಕಾಲ 6-45 ಗಂಟೆಗೆ ಶ್ರೀ ಸಂಗಮೇಶ್ವರ ರಥೋತ್ಸವವು ರಥ ಬೀದಿಯಲ್ಲಿ ಆರಂಭವಾಗುತ್ತಿದ್ದಂತೆ ಸೇರಿದ್ದ ಸಾವಿರಾರು ಸಂಖ್ಯೆಯ ಭಕ್ತರು ಜಯ ಘೋಷ ಹಾಕಿ ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಮೆರವಣಿಗೆಯಲ್ಲಿನ ಕರಡಿ ಮಜಲಿನ ನಾದ ಮತ್ತು ಸಂಗಮೇಶ್ವರ ಜಾತ್ರಾ ಕಮಿಟಿಯ ವತಿಯಿಂದ ರಂಗುರಂಗಿನ ಪಟಾಕಿ ರಥೋತ್ಸವಕ್ಕೆ ಆಗಮಿಸಿದ ಭಕ್ತರ ಕಣ್ಮನವನ್ನು ಆಕರ್ಷಿಸಿತು.


ಜಾತ್ರೆಯ ನಿಮಿತ್ತ ಸುತ್ತಮುತ್ತಲಿನ ಸದ್ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕಾಯಿ ಕರ್ಪೂರ ಹಚ್ಚಿ ಭಕ್ತಿಯ ನಮನ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top