ರಂಗಸಿರಿ ಸಾಂಸ್ಕೃತಿಕ ವೇದಿಕೆ: ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ

Shreya Hegde
0


ಬದಿಯಡ್ಕ: ರಂಗಸಿರಿ ಸಾಂಸ್ಕೃತಿಕ ವೇದಿಕೆ (ರಿ)ಬದಿಯಡ್ಕ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ರಾಮಲೀಲಾ ಸಭಾಭವನದಲ್ಲಿ ನೆರವೇರಿತು.


ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕರೂ ವ್ಯವಸ್ಥಾಪಕರೂ ಆಗಿರುವ ಡಾ. ಶ್ರೀಶ ಪಂಜಿತ್ತಡ್ಕ ಕಾರ್ಯಕ್ರಮದ ಹಿನ್ನೆಲೆ, ಸಂಸ್ಥೆಯ ಇತಿಹಾಸ, ಕಾರ್ಯವ್ಯಾಪ್ತಿ, ಕಾರ್ಯಚಟುವಟಿಕೆಗಳ ವಿವರ ಹಾಗೂ ಉದ್ದೇಶವನ್ನು ವಿವರಿಸುವ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.

'ರಂಗಸಿರಿ'ಯ ದಕ್ಷ ಅಧ್ಯಕ್ಷರಾದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರಭಾವತಿ ಕೆದಿಲಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ 'ರಂಗಸಿರಿ ಸಮೃದ್ಧಿ ನಿಧಿ' ವ್ಯವಸ್ಥೆಗೆ ಚಾಲನೆಯನ್ನು ಕೊಟ್ಟು, ಕಲೆ ಮತ್ತು ಸಂಸ್ಕೃತಿಯ ಕುರಿತು ಅಮೂಲ್ಯವಾದ ಮಾತುಗಳನ್ನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಗೌರವಾನ್ವಿತರಾದ ಸವ್ಯಸಾಚೀ ಯಕ್ಷಗಾನ ಗುರುಗಳು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾರ್ಗದರ್ಶನವನ್ನು ನೀಡಿದರು.


ಸಭೆಯನ್ನುದ್ದೇಶಿಸಿ ಪ್ರೋತ್ಸಾಹದಾಯಕವಾಗಿ ನಲ್ನುಡಿಗಳನ್ನಾಡುತ್ತಾ ಕರಾವಳಿ ಭಾಗದಲ್ಲಿ ಯಕ್ಷಗಾನದ ಪ್ರಾಮುಖ್ಯವನ್ನೂ ವರ್ಣಿಸಿ, ಪುರಾಣಗಳು ಜೀವನಕ್ಕೆ ಆದರ್ಶವಾಗಬೇಕು ಎನ್ನುತ್ತಾ ಮುಖ್ಯ ಅತಿಥಿ ರಾಮಲೀಲಾದ ಮಾಲಿಕರಾದ ಲಕ್ಷ್ಮಣ ಪ್ರಭು ಕರಿಂಬಿಲ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.


ಸಂಸ್ಥೆಯ ಗೌರವ ಸಲಹೆಗಾರರಾದ ಸವ್ಯಸಾಚಿ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ, ರಾಮಲೀಲಾದ ಮಾಲಿಕ ಲಕ್ಷ್ಮಣಪ್ರಭು ಕರಿಂಬಿಲ, ಶ್ರೀಮತಿ ಪ್ರಭಾವತಿ ಕೆದಿಲಾಯ, ಡಾ. ಶ್ರೀಶಕುಮಾರ ಪಂಜಿತ್ತಡ್ಕ, ನಿರಂಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿ ಆಸ್ತಿಕ್ ಆಳ್ವ ಪ್ರಾರ್ಥನೆಯನ್ನು ಮಾಡಿದರು.


ಅಧ್ಯಾಪಕ ನಿರಂಜನ್ ಸ್ವಾಗತಿಸಿದರು. ಕು. ಅಭಿಜ್ಞಾ ಭಟ್ ಬೊಳುಂಬು ವಂದನಾರ್ಪಣೆಗೈದರು. ಸಂಸ್ಥೆಯ ಸದಸ್ಯ ಶಶಿಧರ ಕುದಿಂಗಿಲ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top