ಕಟಪಾಡಿ: ಸಮುದಾಯ ಪಡು ಅಲೆವೂರು, ಜೇಸಿಐ ಉಡುಪಿ ಇಂದ್ರಾಳಿ, ಜೆ ಸಿ ಐ ಅಲೂಮಿನೈ ಕ್ಲಬ್ ಇದರ ಆಶ್ರಯದಲ್ಲಿ ಕೆಎಂಸಿ ಮಣಿಪಾಲ ದಂತ ವೈದ್ಯಕೀಯ ವಿಭಾಗ, ಜಿಲ್ಲಾ ಆಸ್ಪತ್ರೆ ಉಡುಪಿ ಮತ್ತು ಪ್ರಸಾದ್ ನೇತ್ರಾಲಯ ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡು ಅಲೆವೂರು ಇಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿಧಿ ಮೆಡಿಕಲ್ ನ ಪ್ರಮುಖರಾದ ಡಾ. ಲಕ್ಷ್ಮಿ ಪ್ರಸಾದ್, ಆರೋಗ್ಯವೇ ಭಾಗ್ಯ ಈ ರೀತಿಯ ಶಿಬಿರಗಳಿಂದ ಬಹಳಷ್ಟು ಜನರಿಗೆ ಅನಾರೋಗ್ಯದ ಸೂಚನೆಯನ್ನು ಬಹಳ ಬೇಗನೆ ತಿಳಿಯಲು ಸಾಧ್ಯ ಇದರಿಂದ ಮುಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ಕೊಡಬಹುದಾಗಿದೆ ಈ ಗ್ರಾಮದಲ್ಲಿ ಈ ರೀತಿಯ ಶಿಬಿರಗಳನ್ನು ಆಯೋಜನೆ ಮಾಡಿದ್ದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಿದೆ ಎಂದರು.
ಗಿರಿಜಾ ಸರ್ಜಿಕಲ್ ಮುಖ್ಯಸ್ಥ ರವೀಂದ್ರ ಶೆಟ್ಟಿ ಈ ರೀತಿಯ ಶಿಬಿರಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಅಲೂಮಿನೈ ಕ್ಲಬ್ ಇದರ ಜೋನ್ ಚೇರ್ಮನ್ ಅಬ್ದುಲ್ ಜಬ್ಬಾರ್ ಸಾಹೇಬ್ ಜಿಲ್ಲಾಸ್ಪತ್ರೆಯ ಆಪ್ತ ಸಮಾಲೋಚಕ ಮನು, ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ, ನಾದಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿಇಒ ಕಾರ್ತಿಕ್ ಕುಮಾರ್, ಸಮುದಾಯ ಅಲೆವೂರು ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್, ಅಧ್ಯಕ್ಷರಾದ ವೀರ ಸೇರಿಗಾರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ರೂಪೇಶ್ ದೇವಾಡಿಗ, ಪ್ರಸಾದ್ ನೇತ್ರಾಲಯದ ಡಾ. ಪ್ರತ್ಮಾ, ಡಾ. ಚಿತ್ರ ನೆಗಳೂರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ವಿಪುಲ್ ವಹಿಸಿದ್ದರು. ಶಿಬಿರದ ಕಾರ್ಯಕ್ರಮ ಸಂಘಟಕ ಡಾ. ವಿಜಯ ನೆಗಳೂರು ಪ್ರಸ್ತಾವನೆಗೈದರು. ಜೆಸಿಐ ಉಡುಪಿ ಇಂದ್ರಾಳಿ ಪ್ರಾಜೆಕ್ಟ್ ಡೈರೆಕ್ಟರ್ ಅಶೋಕ್ ಸೇರಿಗಾರ್ ಸ್ವಾಗತಿಸಿದರು. ಜ್ಯೋತಿ ಪ್ರಶಾಂತ್ ವಂದಿಸಿದರು.
ಶಿಬಿರದಲ್ಲಿ ಈಸಿಜಿ ಮಧುಮೇಹ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಹಲ್ಲಿನ ತಪಾಸಣೆ ಸೇರಿದಂತೆ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳು ಮತ್ತು ಔಷಧ ವಿತರಣೆ ನಡೆಯಿತು ಸುಮಾರು 150 ಕಿಂತಲೂ ಹೆಚ್ಚು ಜನ ಶಿಬಿರದ ಪ್ರಯೋಜನ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

