ಮಾದಕ ವ್ಯಸನ ತಡೆಗೆ ಸಂಘಟಿತ ಪ್ರಯತ್ನ ಅಗತ್ಯ: ಜನಾರ್ಧನ್ ನಾಯಕ್

Upayuktha
0


ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಮಾದಕ ವಸ್ತುಗಳ ಸೇವನೆಯ ವ್ಯಸನ ಹೆಚ್ಚಾಗುತ್ತಿದ್ದು ಇದರ  ತಡಗಟ್ಟು ವಿಕೆಗೆ ಸಂಘಟಿತ ಪ್ರಯತ್ನ ಅಗತ್ಯ.   ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯ ಜಾಲಕ್ಕೆ ಬಲಿಯಾಗಿ ತಮ್ಮ ಉಜ್ವಲ ಭವಿಷ್ಯವನ್ನೇ ಕಳೆದು ಕೊಳ್ಳುವ ಅಪಾಯವಿದೆ ಎಂದು ಸುರತ್ಕಲ್ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಜನಾರ್ಧನ್ ನಾಯಕ್ ನುಡಿದರು.


ಅವರು  ಆಪತ್ಭಾಂದವ ಸಮಾಜ ಸೇವಾ ಸಂಘ (ರಿ ), ಸುರತ್ಕಲ್, ನಾಗರಿಕ ಸಲಹಾ ಸಮಿತಿ ಸುರತ್ಕಲ್, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ ) ಮಂಗಳೂರು, ಸುರತ್ಕಲ್ ಪೊಲೀಸ್ ಠಾಣೆ, ಸುರತ್ಕಲ್ ಡಿ. ದೇವರಾಜ್ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ದ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿ ನಿಲಯ ದ ಸಹಯೋಗದಲ್ಲಿ ವಿದ್ಯಾರ್ಥಿ ನಿಲಯ ದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಂಪನ್ಮೂಲ ವ್ಯಕ್ತಿ  ಶೈಕ್ಷಣಿಕ ಮತ್ತು ಆರೋಗ್ಯ ಆಪ್ತ ಸಮಾಲೋಚಕಿ ಡಾ.ಕೆ. ಕುಸುಮ ಮಾತನಾಡಿ ಕ್ಷಣಿಕ ಸುಖಕ್ಕಾಗಿ ಅಥವಾ ಒತ್ತಡಕ್ಕಾಗಿ ವ್ಯಸನಕ್ಕೆ ಬಲಿಯಾಗುವ ವ್ಯಕ್ತಿಗಳನ್ನು ಆಪ್ತ ಸಮಾಲೋಚನೆ ಮತ್ತು ವೈದ್ಯಕೀಯ ಚಿಕಿತ್ಸೆ ಗಳ ಮೂಲಕ ಮುಖ್ಯ ವಾಹಿನಿ ಗೆ ತರಬಹುದಾಗಿದೆ. ವಿದ್ಯಾರ್ಥಿಗಳು ಹಾದಿ ತಪ್ಪದಂತೆ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆ ಗಳು ಜಾಗೃತಿ ಮೂಡಿಸುತ್ತಿರ ಬೇಕು ಎಂದರು.


ಮಾದಕ ವ್ಯಸನಿ ಗಳಾಗಿ ನೋವು ಉಂಡು ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ಯ ಮೂಲಕ ಮರು ಬದುಕು ಕಟ್ಟಿ ಕೊಂಡವರು ತಮ್ಮ ಬದುಕಿನ ಕಥನ ನಿರೂಪಿಸಿದರು. 


ಸುರತ್ಕಲ್  ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜ ಮೋಹನ ರಾವ್ ವ್ಯಸನ ದ ಕುರಿತು ಅರಿವು ಮೂಡಿಸಿ ಕೊಂಡು  ಕಲಿಕೆ ಗೆ ಗಮನ ನೀಡಿ ಉತ್ತಮ ಪ್ರಜೆಗಳಾಗ ಬೇಕು ಎಂದರು.


ವಿದ್ಯಾರ್ಥಿ ನಿಲಯ ದ ಮೇಲ್ವಿಚಾರಕ ರಾಧೇಶ್  ಅಧ್ಯಕ್ಷತೆ ವಹಿಸಿ ಮಾತನಾಡಿ ಜಾಗೃತಿ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿ ಯಾಗಿದ್ದು ಎಲ್ಲಾ ವಿದ್ಯಾರ್ಥಿ ನಿಲಯ ಗಳಲ್ಲೂ ಅರಿವು ಕಾರ್ಯಕ್ರಮ ಸಂಘಟಿಸಲಾಗುವುದು ಎಂದರು.


ಆಪತ್ಭಾಂದವ ಸಮಾಜ ಸಂಘದ  ಗೌರವ ಸಲಹೆಗಾರ ಪ್ರೊ. ಕೃಷ್ಣ ಮೂರ್ತಿ ಸ್ವಾಗತಿಸಿದರು. ಮೂಲತ್ವ  ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಮೂಲತ್ವ ಪ್ರಾಸ್ತಾವಿಕ ನುಡಿ ಗಳನ್ನು ನುಡಿದರು.


ಆಪತ್ಭಾಂದವಸಮಾಜ ಸೇವಾ ಸಂಘ ದ ಅಧ್ಯಕ್ಷ ಉಮೇಶ್ ಇಡ್ಯಾ ವಂದಿಸಿದರು.


ವಿದ್ಯಾಧರ್ ಎಸ್. ಕಾರ್ಯಕ್ರಮ ನಿರೂ ಪಿಸಿದರು. ನಾಗರಿಕ ಸಲಹಾ ಸಮಿತಿ ಯ ಕಾರ್ಯದರ್ಶಿ ಸತೀಶ್ ಸದಾನಂದ್, ಸದಸ್ಯ ರಾಮಣ್ಣ ಗೌಡ, ರಮೇಶ್ ಶೆಟ್ಟಿ, ಅಪದ್ಧಾಂ ದವ ಸಮಾಜ ಸೇವಾ ಸಂಘದ ಕಾರ್ಯದಶಿ೯ ಲೀಲಾಧರ ಕಡಂಬೋಡಿ, ಸುಧಾಕರ್, ಸುರತ್ಕಲ್ ಪೊಲೀಸ್ ಠಾಣೆ ಯ ತಿರುಪತಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top