ನಡ ಸರಕಾರಿ ಪದವಿಪೂರ್ವ ಕಾಲೇಜಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ ಗೌರವ

Upayuktha
0



ಬೆಳ್ತಂಗಡಿ: ಬಿ.ಸಿ. ರೋಡ್‌ನ ಸ್ಪರ್ಶ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಪ್ರತಿಷ್ಠಿತ "MITE CULTURAL FEST 2026" ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಡ ಸರಕಾರಿ ಪದವಿಪೂರ್ವ ಕಾಲೇಜು ಅಭೂತಪೂರ್ವ ಸಾಧನೆಗೆ ಪಾತ್ರವಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಅತ್ಯುತ್ತಮ ಅಭಿನಯ ನೀಡಿದ ಕಾಲೇಜಿನ ತಂಡವು ಪದವಿ ಪೂರ್ವ ವಿಭಾಗದ "ಸಮಗ್ರ ಚಾಂಪಿಯನ್ ಪ್ರಶಸ್ತಿ" ಯನ್ನು ತನ್ನದಾಗಿಸಿಕೊಂಡಿದೆ.


ಈ ಸಾಂಸ್ಕೃತಿಕ ಕಲಾಕೂಟದಲ್ಲಿ ಕಾಲೇಜಿನ ಒಟ್ಟು 26 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರೆತಿದ್ದು, 'ಪೆನ್ಸಿಲ್ ಸ್ಕೆಚಿಂಗ್' (Pencil Sketching) ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಾಹಿಲ್ ಅಹಮದ್ ಪ್ರಥಮ ಸ್ಥಾನ ಗಳಿಸಿದರೆ, 'ಫೇಸ್ ಪೇಂಟಿಂಗ್' (Face Painting) ಸ್ಪರ್ಧೆಯಲ್ಲಿ ಶೇಕ್ ಅದಿಲ್ ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕುಮಾರಿ ನಯನ ಅವರ ಸಮರ್ಥ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಿಲ್ಲಿ ಪಿ.ವಿ. ಅವರ ನಿರಂತರ ಪ್ರೋತ್ಸಾಹ ಹಾಗೂ ಉಪನ್ಯಾಸಕರುಗಳಾದ ಶ್ರೀಮತಿ ವಸಂತಿ ಪಿ., ಶ್ರೀಮತಿ ಶಿಲ್ಪಾ ಡಿ., ಶ್ರೀಮತಿ ಪವಿತ್ರ, ಶ್ರೀಮತಿ ಸುಕನ್ಯ, ಶ್ರೀಮತಿ ಸವಿತಾ ಮತ್ತು ಕುಮಾರಿ ಶ್ರಾವ್ಯ ಅವರ ಸುಸೂತ್ರ ಸಹಕಾರದಿಂದಾಗಿ ಈ ಐತಿಹಾಸಿಕ ಜಯ ಸಾಧ್ಯವಾಗಿದೆ ಎಂದು ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.


ಸರಕಾರಿ ಕಾಲೇಜಿನ ಈ ಸಾಧನೆಯು ತಾಲೂಕಿನಾದ್ಯಂತ ಸಾರ್ವಜನಿಕರ ಹಾಗೂ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top