ಮಂಗಳೂರು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರಿಗೆ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗಸಂಸ್ಥೆಯ ಆತಿಥ್ಯದಲ್ಲಿ ಆಯೋಜನೆಗೊಳ್ಳುತ್ತಿರುವ ‘ಮಹಾಧಿವೇಶನ ಹಾಗೂ 73ನೇ ವಾರ್ಷಿಕ ಮಹಾಸಭೆ’ಯ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಸಮರ್ಪಿಸಲಾಯಿತು.
ಅಧ್ಯಕ್ಷರು ಹಾಗೂ ನೃತ್ಯ ಗುರುಗಳಾದ ಶ್ರೀಧರ ಹೊಳ್ಳ ಅವರು ಪೂಜ್ಯ ಜಗದ್ಗುರುಗಳಿಗೆ ಶ್ರೀಮುಖ ಸಹಿತ ಆಮಂತ್ರಣ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಿದರು. ಆಮಂತ್ರಣವನ್ನು ಕೃಪಾಪೂರ್ವಕವಾಗಿ ಸ್ವೀಕರಿಸಿದ ಪೂಜ್ಯ ಶ್ರೀಗಳು, ಸಮಾವೇಶವು ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕೋಶಾಧಿಕಾರಿ ಪದ್ಮನಾಭ ಮಯ್ಯ, ಸದಸ್ಯೆ ವಸಂತ ಲಕ್ಷ್ಮೀ ಹಾಗೂ ಪುರೋಹಿತರಾದ ಶ್ರೀರಂಗ ಐತಾಳ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

