ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯಿಂದ ವಿಜೃಂಭಣೆಯ "ಸಾಂಸ್ಕೃತಿಕ ಕಲಾ ವೈಭವ"

Upayuktha
0



ಕಾಸರಗೋಡು: ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ "ಸಾಂಸ್ಕೃತಿಕ ಕಲಾ ವೈಭವ - ಕಲಾವಿದರ ಕಲರವ" ಕಾರ್ಯಕ್ರಮವು ವಿವಿಧೆಡೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಚೇವಾರ್, ಶ್ರೀ ಗೋವನಿತಾಶ್ರಯ ಟ್ರಸ್ಟ್ (ರಿ.) ಪಜೀರು ಮುಡಿಪು, ಜೈ ಶಕ್ತಿ ಮಿತ್ರ ಮಂಡಳಿ ಹಾಗೂ ಮಾತೃ ಮಂಡಳಿ ಇರಾ ಮತ್ತು ಹನುಮಾನ್ ಫ್ರೆಂಡ್ಸ್ ಕ್ಲಬ್ (ರಿ.) ವಾಂತಿಚ್ಚಾಲು ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊರತ್ತಿಕ್ಕಾಡು ಚಾವಡಿಕಟ್ಟೆ ಚೇವಾರ್, ಪಜೀರು, ಇರಾ ಹಾಗೂ ವಾಂತಿಚ್ಚಾಲು ಮುಂತಾದ ಕಡೆಗಳಲ್ಲಿ ಕಲಾ ಪ್ರದರ್ಶನಗಳು ವಿಜೃಂಭಣೆಯಿಂದ ಜರುಗಿದವು.


ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯಲ್ಲಿ ನಡೆದ ಈ ಸಾಂಸ್ಕೃತಿಕ ವೈಭವದಲ್ಲಿ ಸಂಸ್ಥೆಯ ಅಪ್ರತಿಮ ಪ್ರತಿಭಾವಂತ ಕಲಾವಿದರು ವೈವಿಧ್ಯಮಯ ಕಲಾ ಪ್ರಸ್ತುತಿಗಳನ್ನು ನೀಡಿ ಪ್ರೇಕ್ಷಕರ ಮನಸೂರೆಗೊಂಡರು.


ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ರಂಗಸೇವೆಯನ್ನು ಗುರುತಿಸಿ, ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಪ್ರಮುಖ ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top