ಉಡುಪಿ: ವೈದ್ಯರಲ್ಲಿ ಸಾಹಿತ್ಯದ ಮನೋಭಾವ ಇದ್ದರೆ ಚಿಕಿತ್ಸೆಗೆ ಪೂರಕವಾಗಲು ಸಾಧ್ಯ ಎಂದು ಪ್ರಸಿದ್ಧ ಸಾಹಿತಿ ಎಚ್ ಡುಂಡಿರಾಜ್ ಹೇಳಿದರು.
ಅವರು ಸೆ.6ರಂದು ಭಾನುವಾರ ಉಡುಪಿಯ ಅಂಬಲಪಾಡಿಯ ಭವಾನಿ ಸಭಾಂಗಣದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ, ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ 2026 ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯವು ವಿಶ್ವ ಭಾಷೆಯಾಗಿದೆ ಇದು ಎಲ್ಲಾ ಜನರನ್ನು ಒಟ್ಟುಗೂಡಿಸುವ ಅಪೂರ್ವ ಸಾಧನವಾಗಿದೆ ಎಂದರು. ಸರ್ಕಾರ ನೀಡುವ ಪ್ರಶಸ್ತಿಗಿಂತ ಖಾಸಗಿ ಸಂಸ್ಥೆಯವರು ನೀಡುವ ಗೌರವ ಅತಿ ಹೆಚ್ಚು ಮೌಲ್ಯದ್ದು ಎಂದರು.
ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ ವಿಜಯ ಬಲ್ಲಾಳ್ ಉದ್ಧಾಟನೆ ನೆರವೇರಿಸಿ ಮಾತನಾಡಿ, ನಾವು ಪರಿಪೂಣ೯ರಾಗಬೇಕಾದರೆ ಶಿಕ್ಷಣದೊಂದಿಗೆ ಇತರ ಮೌಲ್ಯಯುತ ಕಲೆ ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಕುರಾಡಿ ಸೀತಾರಾಮ ಅಡಿಗರು ಅದ್ಭುತ ಸಾಹಿತಿಯಾಗಿದ್ದರು. ತನ್ನ ಕವನದ ಮೂಲಕ ಎಲ್ಲರನ್ನ ಒಗ್ಗೂಡಿಸುವ ಕೆಲಸ ಮಾಡಿದ್ದರು ಇಂತಹ ಅಪೂರ್ವ ಕವಿ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಅಭಿನಂದನೀಯ ಎಂದರು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೂಳೆ ಗ್ರಾಮದ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆಯುರ್ವೇದ ಖ್ಯಾತ ವೈದ್ಯ ಡಾ. ಲಕ್ಷ್ಮಣ್ ವಿ.ಎ. ಅವರಿಗೆ ಕುರಾಡಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಶುಭ ಹಾರೈಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್ ಮರವಂತೆ, ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.
ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿದರು. ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ನ ಅಧ್ಯಕ್ಷ ನಾರಾಯಣ ಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ಸಂ. ಕಾಯ೯ದಶಿ೯ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ತಾಲೂಕು ಘಟಕದ ಕಾರ್ಯದರ್ಶಿ ರಂಜಿನಿ ವಸಂತ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಜನಾರ್ದನ್ ಕೊಡವೂರು ಸಹಕರಿಸಿದರು. ಕವಿತಾ ಮಡಿ, ಪ್ರತಿಭಾ ಮತ್ತು ಪೂರ್ಣಿಮಾ ಅಡಿಗ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಡಾ. ಬೇಲೂರು ರಘುನಂದನ್ ಅವರ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಖ್ಯಾತ ಕಲಾವಿದೆ ಡಾ. ಮೀರಾ ಎಚ್.ಎನ್. ಅವರು 'ಪಂಚವರ್ಣೆ' ಏಕ ವ್ಯಕ್ತಿ ರಂಗ ಪ್ರಯೋಗ ಪ್ರದರ್ಶಿಸಿದರು. ರಾಜೇಶ್ ಭಟ್ ಷಣಿಯಾಡಿ ಸಂಯೋಜಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


