ಐಫೋನ್ 18 ಪ್ರೊ ಸರಣಿಗೆ ಬುಕಿಂಗ್ ಆರಂಭ

Upayuktha
0



ಮಂಗಳೂರು: ಬಹುನಿರೀಕ್ಷಿತ ನೂತನ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಸ್ಮಾರ್ಟ್‍ಫೋನ್‍ಗಳ ಅಧಿಕೃತ ಮುಂಗಡ ಬುಕಿಂಗ್‍ಗೆ ಟಾಟಾ ಸಮೂಹದ ಕ್ರೋಮಾದಲ್ಲಿ ಚಾಲನೆ ನೀಡಲಾಗಿದೆ.


ದೇಶಾದ್ಯಂತ ಗ್ರಾಹಕರು ಆಪಲ್ ಕಂಪನಿಯ ಈ ಅತ್ಯಾಧುನಿಕ ಸ್ಮಾರ್ಟ್‍ಫೋನ್‍ಗಳನ್ನು ಅತ್ಯಂತ ಸುಲಭವಾದ ಹಾಗೂ ಆಕರ್ಷಕ ಮುಂಗಡ ಬುಕಿಂಗ್ ಕೊಡುಗೆಯೊಂದಿಗೆ ದೇಶವ್ಯಾಪಿ ಹರಡಿರುವ ಎಲ್ಲಾ ಕ್ರೋಮಾ ಮಳಿಗೆಗಳು, croma.com ಆನ್‍ಲೈನ್ ಜಾಲತಾಣ, ಟಾಟಾ ನ್ಯೂ ಮೊಬೈಲ್ ಆ್ಯಪ್ ಮತ್ತು ಬಿಗ್ ಬಾಸ್ಕೆಟ್ ಪ್ಲಾಟ್‍ಫಾರ್ಮ್‍ಗಳ ಮೂಲಕ ತಮ್ಮದಾಗಿಸಿಕೊಳ್ಳಲು ಕಾಯ್ದಿರಿಸಬಹುದಾಗಿದೆ.


ನೂತನವಾಗಿ ಬಿಡುಗಡೆಯಾಗಿರುವ ಈ ಪ್ರೊ ಸರಣಿಯ ಸ್ಮಾರ್ಟ್‍ಫೋನ್‍ಗಳು ಅದ್ಭುತ ಕಾರ್ಯಕ್ಷಮತೆ ಹಾಗೂ ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಆಪಲ್‍ನ ಅತ್ಯುನ್ನತ ತಾಂತ್ರಿಕ ಪ್ರಗತಿಯನ್ನು ಮಾರುಕಟ್ಟೆಗೆ ತಂದಿವೆ. ಇದರಲ್ಲಿ ಅತ್ಯಂತ ಬಲಿಷ್ಠವಾದ ಸುಧಾರಿತ ಎ20 ಪ್ರೊ ಪ್ರೊಸೆಸರ್ ಚಿಪ್, ಆಪಲ್ ಕಂಪನಿಯೇ ಸ್ವತಂತ್ರವಾಗಿ ತಯಾರಿಸಿರುವ ಸಿ2 ವೈರ್‍ಲೆಸ್ ಮೋಡೆಮ್ ಮತ್ತು ಭೌತಿಕ ವೇರಿಯಬಲ್ ಅಪರ್ಚರ್ ಒಳಗೊಂಡ ನೂತನ 48 ಮೆಗಾಪಿಕ್ಸೆಲ್ ಫ್ಯೂಷನ್ ಮುಖ್ಯ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.


ದೇಶದ 200ಕ್ಕೂ ಅಧಿಕ ನಗರಗಳಲ್ಲಿ ವಿಸ್ತರಿಸಿರುವ 560ಕ್ಕೂ ಹೆಚ್ಚಿನ ಕ್ರೋಮಾ ಮಳಿಗೆಗಳಲ್ಲಿ, croma.com ಜಾಲತಾಣದಲ್ಲಿ, ಟಾಟಾ ನ್ಯೂ ಆ್ಯಪ್ ನಲ್ಲಿ ಹಾಗೂ ಬಿಗ್ ಬಾಸ್ಕೆಟ್ ಆ್ಯಪ್‍ನಲ್ಲಿ ಮುಂಗಡ ಬುಕಿಂಗ್ ಸೌಲಭ್ಯ ಲಭ್ಯವಿರುತ್ತದೆ. ಸಂಪೂರ್ಣ ಬೆಲೆ ಪಟ್ಟಿ, ರಿಯಾಯಿತಿ ವಿವರ ಹಾಗೂ ಫೋನ್‍ಗಳ ಲಭ್ಯತೆಯ ಮಾಹಿತಿಗಾಗಿ ಗ್ರಾಹಕರು ಸಮೀಪದ ಕ್ರೋಮಾ ಮಳಿಗೆಗೆ ಭೇಟಿ ನೀಡಬಹುದು ಇಲ್ಲವೇ ಅಧಿಕೃತ ವೆಬ್‍ಸೈಟ್ croma.com  ಅನ್ನು ಪರಿಶೀಲಿಸಬಹುದು ಎಂದು ತಿಳಿಸಿದೆ.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top