ಅಜ್ಜ-ಅಜ್ಜಿಯರ ದಿನಾಚರಣೆ

Shreya Hegde
0


ಮಂಗಳೂರು:‌ ಕೆನರಾ ನಂದಗೋಕುಲ, ಕೋಡಿಯಾಲ್ ಬೈಲ್ ಹಾಗೂ ಇದರ ಶಾಖೆಯಾದ ಪದವಿನಂಗಡಿ ಸಂಸ್ಥೆಗಳ ವತಿಯಿಂದ ಅಜ್ಜ-ಅಜ್ಜಿಯರ ದಿನಾಚರಣೆಯನ್ನು ಸೆಪ್ಟೆಂಬರ್ 19ರಂದು ಶ್ರೀ ಸುಧೀಂದ್ರ ಆಡಿಟೋರಿಯಂನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


“अभिवादनशीलस्य नित्यं वृद्धोपसेविनः ।

चत्वारि तस्य वर्धन्ते आयुर्विद्या यशो बलम् ॥”


ಹಿರಿಯರಿಗೆ ಗೌರವ ಸಲ್ಲಿಸಿ, ಅವರನ್ನು ಸೇವೆ ಸಲ್ಲಿಸುವವನಿಗೆ ಆಯುಷ್ಯ, ವಿದ್ಯೆ, ಯಶಸ್ಸು ಮತ್ತು ಬಲವು ವೃದ್ಧಿಯಾಗುತ್ತದೆ ಎಂಬ ಈ ಸುಭಾಷಿತವು ಅಜ್ಜ-ಅಜ್ಜಿಯರ ಮಹತ್ವವನ್ನು ಸಾರುತ್ತದೆ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಅಜ್ಜ-ಅಜ್ಜಿಯರು ಹಾಗೂ ಉಪಸ್ಥಿತರಿದ್ದ ಎಲ್ಲರನ್ನು ಶ್ರೀಮತಿ ಪ್ರಮೀಳಾ ಅವರು ಆತ್ಮೀಯವಾಗಿ ಸ್ವಾಗತಿಸಿದರು.


ಮುಖ್ಯೋಪಾಧ್ಯಾ ಯಿನಿ ಶ್ರೀಮತಿ ಉಜ್ವಲ್ ಮಲ್ಯ ಅವರು ತಮ್ಮ ಪ್ರೇರಣಾದಾಯಕ ಮಾತುಗಳ ಮೂಲಕ ಇಂದಿನ ವೇಗದ ಮತ್ತು ಒತ್ತಡಯುತ ಜೀವನಶೈಲಿಯಲ್ಲಿ ಅಜ್ಜ-ಅಜ್ಜಿಯರ ಪಾತ್ರ ಹಾಗೂ ಮಕ್ಕಳ ಜೀವನದಲ್ಲಿ ಅವರ ಪ್ರೀತಿ, ಕಾಳಜಿ ಮತ್ತು ಮಾರ್ಗದರ್ಶನದ ಮಹತ್ವವನ್ನು ವಿವರಿಸಿದರು. ಅಜ್ಜ-ಅಜ್ಜಿಯರು ಮಕ್ಕಳಿಗೆ ನೀಡುವ ಸಮಯ, ಪ್ರೀತಿ ಮತ್ತು ಜೀವನಾನುಭವಗಳು ಅಮೂಲ್ಯವಾದವು ಎಂದು ತಿಳಿಸಿದರು.


ಕಾರ್ಯಕ್ರಮದ ಅಂಗವಾಗಿ ಅಜ್ಜ-ಅಜ್ಜಿಯರಿಗಾಗಿ ವಿವಿಧ ಮನರಂಜನಾ ಹಾಗೂ ಚಟುವಟಿಕೆಯ ಆಟಗಳನ್ನು ಆಯೋಜಿಸಲಾಗಿತ್ತು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಸಂತೋಷದಿಂದ ಸಮಯ ಕಳೆದರು. ಆಟಗಳು ನಗು, ಉತ್ಸಾಹ ಮತ್ತು ಆತ್ಮೀಯತೆಯಿಂದ ಕೂಡಿದ್ದವು.


ಮಕ್ಕಳು ಮತ್ತು ಅಜ್ಜ-ಅಜ್ಜಿಯರ ನಡುವಿನ ಪ್ರೀತಿಯ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು. ಸಂತೋಷ, ನಗು ಹಾಗೂ ಆತ್ಮೀಯ ಬಾಂಧವ್ಯದೊಂದಿಗೆ ಕಾರ್ಯಕ್ರಮವು ಸುಂದರವಾಗಿ ಸಂಪನ್ನಗೊಂಡಿತು.


ಕೊನೆಯಲ್ಲಿ ಶ್ರೀಮತಿ ಅವಿಟಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top