ಸುರತ್ಕಲ್: ಆಧುನಿಕ ಭಾರತದ ನಿರ್ಮಾಣದಲ್ಲಿ ಕಾರ್ಯಯೋಜನೆ ಮತ್ತು ಅನುಷ್ಠಾನದ ಮೂಲಕ ನಿರಂತರವಾಗಿ ಶ್ರಮಿಸುತ್ತಿರುವ ಇಂಜಿನಿಯರ್‌ಗಳ ಸೇವೆ ಶ್ಲಾಘನೀಯ ಎಂದು ಹಿರಿಯ ಇಂಜಿನಿಯರ್ ಲಯನ್ ಪಿ. ಕಿಶೋರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ಅವರು ಸುರತ್ಕಲ್ ರೋಟರಿ ಕ್ಲಬ್ ಆಯೋಜಿಸಿದ್ದ ಇಂಜಿನಿಯರ್ ಗಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತಮ್ಮ ಕಾಯಕ ನಿಷ್ಠೆ, ಬದ್ಧತೆ ಮತ್ತು ಯೋಜನೆಗಳ ಮೂಲಕ ಆದರ್ಶ ಮಾದರಿಯನ್ನು ರೂಪಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ನವರ ಸ್ಮರಣೆ ಸರ್ವರಿಗೂ ಪ್ರೇರಣೆಯಾಗಿದೆ ಎಂದು ಅವರು ನುಡಿದರು.
ವಿಶೇಷ ಸನ್ಮಾನ ಹಾಗೂ ಗೌರವಾರ್ಪಣೆ:
ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ಮತ್ತು ಸಾಮಾಜಿಕ ಸೇವೆಯಲ್ಲಿ ಅನನ್ಯ ಸಾಧನೆಗೈದಿರುವ ಹಿರಿಯ ಇಂಜಿನಿಯರ್ ಲಯನ್ ಪಿ. ಕಿಶೋರ್ ರಾವ್ ಅವರನ್ನು ಕ್ಲಬ್ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು. ಜೊತೆಗೆ, ಸುರತ್ಕಲ್ ರೋಟರಿ ಕ್ಲಬ್‌ನಲ್ಲಿ ಇಂಜಿನಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಸದಸ್ಯರನ್ನು ಹಾಗೂ ರೋಟರಿ ಕುಟುಂಬದ ಇಂಜಿನಿಯರ್‌ಗಳನ್ನು ಈ ವೇಳೆ ವಿಶೇಷವಾಗಿ ಗೌರವಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಟಿ. ಎನ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಸಹಾಯಕ ಗವರ್ನರ್ ಸಂದೀಪ್ ರಾವ್ ಇಡ್ಯಾ ಮತ್ತು ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಕೋರಲಾಗಿದ್ದು, ಅಂತಿಮವಾಗಿ ಕಾರ್ಯದರ್ಶಿ ಶ್ರೀನಿವಾಸ ರಾವ್ ಪಾದೆಬೆಟ್ಟು ವಂದಿಸಿದರು.
