ಬದುಕಿನಲ್ಲಿ ದೇಶದ ಪಾತ್ರ ಮರೆಯದಿರಿ: ಪೇಜಾವರ ಶ್ರೀ ಕಿವಿಮಾತು

Upayuktha
0

ದೀನದಯಾಳು ಉಪಾಧ್ಯಾಯ ಕಾಲೇಜು ವಿದ್ಯಾರ್ಥಿ ಸಂವಾದ




ನವದೆಹಲಿ: ಯುವ ಪೀಳಿಗೆಯು ಒಳ್ಳೆಯ ವಿದ್ಯೆ, ಉದ್ಯೋಗ ಹಾಗೂ ಸಂಸ್ಕಾರಗಳನ್ನು ಅಳವಡಿಸಿಕೊಂಡು ಶ್ರೇಷ್ಠ ನಾಗರಿಕರಾಗಿ ಬಾಳುವುದೇ ದೇಶಕ್ಕೆ ನಾವು ಸಲ್ಲಿಸುವ ಅತಿ ದೊಡ್ಡ ಸೇವೆಯಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದರು.


ಇಲ್ಲಿನ ದೀನದಯಾಳು ಉಪಾಧ್ಯಾಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.


ರಾಷ್ಟ್ರದೇವೋ ಭವ ಸಂದೇಶ:

ಉಪನಿಷತ್ತುಗಳು 'ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿ ದೇವೋ ಭವ' ಎಂದು ಬೋಧಿಸಿವೆ. ಆದರೆ, ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇದರೊಂದಿಗೆ 'ರಾಷ್ಟ್ರದೇವೋ ಭವ' ಎಂಬ ದಿವ್ಯ ಸಂದೇಶವನ್ನೂ ಸೇರಿಸಿದ್ದರು ಎಂದು ಶ್ರೀಗಳು ಸ್ಮರಿಸಿದರು. ಮಾನವನು ಸಮಾಜ ಜೀವಿಯಾಗಿದ್ದು, ಈ ಮಣ್ಣಿನ ನೀರು, ಗಾಳಿ, ಬೆಳಕು ಹಾಗೂ ಸರ್ಕಾರಗಳು ಒದಗಿಸುವ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆಯುತ್ತಾನೆ. ಹಾಗಾಗಿ ಬದುಕಿನಲ್ಲಿ ದೇಶದ ಪಾತ್ರವನ್ನು ಎಂದಿಗೂ ಮರೆಯಬಾರದು. ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸುವ ನಾಗರಿಕರು ಮೂಲಭೂತ ಕರ್ತವ್ಯಗಳನ್ನೂ ನಿಷ್ಠೆಯಿಂದ ಪಾಲಿಸಬೇಕು ಎಂದು ಮಹಾಭಾರತ ಮತ್ತು ಭಗವದ್ಗೀತೆಯ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.


ರಾಜಕೀಯ ಪ್ರೇರಿತ ಜಾತ್ಯತೀತತೆಯ ವ್ಯಾಖ್ಯಾನ ಬದಲಾಗಲಿ:

ಸಂವಾದದ ವೇಳೆ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿಯವರು, "ಪ್ರಸ್ತುತ ಚಾಲ್ತಿಯಲ್ಲಿರುವ ರಾಜಕೀಯ ಪ್ರೇರಿತ ಸೆಕ್ಯುಲರಿಸಂ (ಜಾತ್ಯತೀತತೆ) ತತ್ವವು ಸಂಪೂರ್ಣ ತಪ್ಪಾಗಿದ್ದು, ಅದು ಬದಲಾಗಬೇಕಿದೆ. ಭಾರತೀಯ ಸನಾತನ ಅಧ್ಯಾತ್ಮಿಕ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠವಾದ ಜಾತ್ಯತೀತ ತತ್ವಗಳಿವೆ. ಪ್ರಪಂಚದ ಬೇರೆಲ್ಲೂ ಇಂತಹ ಉದಾರ ತತ್ವ ಕಾಣಲು ಸಾಧ್ಯವಿಲ್ಲ" ಎಂದರು.


ಸಮಾಜದ ಸ್ಥಿತ್ಯಂತರದ ಕುರಿತು ಮಾತನಾಡುತ್ತಾ, "ಎಲ್ಲೆಡೆಯ ತಂಗಾಳಿ ಮನೆಯೊಳಗೆ ಬರಲಿ, ಆದರೆ ಅದೇ ತಂಗಾಳಿ ಬಿರುಗಾಳಿಯಾಗಿ ನಮ್ಮ ಮನೆಯನ್ನೇ ಅಲುಗಾಡಿಸಿದರೆ ಹೇಗೆ?" ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ, ಭಾರತೀಯರಲ್ಲದವರಿಗೆ ದೇಶದಲ್ಲಿ ಮತದಾನದ ಹಕ್ಕು ನೀಡಲೇಬಾರದು ಎಂದು ಖಾರವಾಗಿ ಪ್ರತಿಪಾದಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಹೇಮಚಂದ್ ಜೈನ್, ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಂಡು ಗೌರವಿಸಿ ಸತ್ಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top