ವಿದ್ಯಾರ್ಥಿಗಳ ತಾಂತ್ರಿಕ ನಾವೀನ್ಯತೆಯ ಪ್ರಾಜೆಕ್ಟ್ ಗಳಿಗೆ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆರ್ಥಿಕ ನೆರವು

Upayuktha
0

ಮಂಗಳೂರು: ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜು ತನ್ನ ಅಂತಿಮ ವರ್ಷದ ಬಿ.ಇ. ವಿದ್ಯಾರ್ಥಿಗಳ  ಆಯ್ದ ಐದು ತಾಂತ್ರಿಕ ನಾವಿನ್ಯತೆಯ ಪ್ರಾಜೆಕ್ಟ್ ಗಳ ಅಭಿವೃದ್ಧಿಗೆ  ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿನ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಯ ಪ್ರಾಜೆಕ್ಟ್ ಅಭಿವೃದ್ಧಿ ಬೆಂಬಲ ಯೋಜನೆಯ ವತಿಯಿಂದ ಕಾಲೇಜಿನ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಮತ್ತು ಸಮಾಲೋಚನಾ ವಿಭಾಗದ ಮೂಲಕ ನಾವೀನ್ಯತೆ, ಪ್ರಯೋಗಾತ್ಮಕ ಕಾರ್ಯ, ವಿದ್ಯಾರ್ಥಿಗಳಿಂದ ಮಾದರಿ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. 


ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇನ್ಫರ್ಮೇಶನ್ ಸೈನ್ಸ್ ಮತ್ತು ಇಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ವಿಭಾಗದಿಂದ ಈ ಪ್ರಾಜೆಕ್ಟ್ ಗಳು ಆಯ್ಕೆಯಾಗಿವೆ. ಶಕ್ತಿಯ ನಿರ್ವಹಣೆ ಕೃಷಿತಂತ್ರಜ್ಞಾನ ರೋಬೋಟಿಕ್ಸ್ ಅಟೋಮೇಶನ್ ಮತ್ತು ಹೆಲ್ತ್ ಕೇರ್ ವಿಷಯಗಳಲ್ಲಿ ಈ ಪ್ರಾಜೆಕ್ಟ್ ಗಳು ರೂಪುಗೊಂಡಿವೆ.


ಸಿ.ಎಸ್. ವಿಭಾಗ ಮುಖ್ಯಸ್ಥ  ಡಾ. ರಾಜಗೋಪಾಲ್ ಕೆ.ಟಿ. ಮಾರ್ಗದರ್ಶನದ ವೋಲ್ಟಿಕ್ಸ್ 

ಐ.ಎಸ್. ವಿಭಾಗದ ಸಂದೀಪ್ ಕಿಣಿ  ಎಂ. ಮಾರ್ಗದರ್ಶನದ ಅರೆಕಾ ಸೆನ್ಸ್ ಗೀತಾಲಕ್ಷ್ಮೀ  ಮಾರ್ಗದರ್ಶನ ದಲ್ಲಿ ಇಂಟೆಲಿಜೆಂಟ್ ರೊಬೋಟಿಕ್ ಸಿಸ್ಟಮ್ ಫಾರ್ ಕೌ ಡಂಗ್ ಡಿಟೆಕ್ಷನ್

ಇ.ಸಿ. ವಿಭಾಗದ ಡಾ. ಗಣೇಶ್ ವಿ.ಭಟ್ ಮಾರ್ಗದರ್ಶನದಲ್ಲಿ ಅಟೋಮೇಟೆಡ್ ರಬ್ಬರ್ ಟ್ಯಾಪಿಂಗ್ ಡಿ ವೈಸ್ ಮತ್ತು ಡಿಜಿಟಲ್ ಸೆತಸ್ಕೋಪ್ ಪ್ರಾಜೆಕ್ಟ್ ಗಳು ಈ ಅನುದಾನಕ್ಕೆ ಆಯ್ಕೆಯಾಗಿವೆ. 


ಪ್ರಾಯೋಗಿಕ ಅನುಭವಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾಲೇಜು ಆದ್ಯತೆ ನೀಡಿದ್ದು ನಾವೀನ್ಯತೆಯ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದೆ. ಈ ಮೂಲಕ ಕಾಲೇಜಿನ ಸಾಂಸ್ಥಿಕ ಸಂಶೋಧನೆ ಮತ್ತು ನಾವಿನ್ಯತೆಗೆ ಒತ್ತು ನೀಡಲಾಗಿದ್ದು ಸಮಾಜದ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದೆ. ಈ ನಿಟ್ಟಿನಲ್ಲಿ ವಿಜೇತ ಪ್ರಾಜೆಕ್ಟ್ ರೂಪಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗವು ಅಭಿನಂದಿಸಿದೆ.

 

ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಆದೇಶದ ಪ್ರತಿಗಳನ್ನು ವಿತರಿಸಲಾಗಿದ್ದು ಪ್ರಾಂಶುಪಾಲ ಡಾ.ಡೇಮಿಯನ್ ಆಂಟನಿ ಡಿ ಮೆಲ್ಲೋ, ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಡೀನ್ ಡಾ. ಉದಯ ಕುಮಾರ್ ಶೆಣೈ, ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಸಂಯೋಜಕ ಡಾ, ಅಭಿಷೇಕ್ ಎಸ್. ರಾವ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top