ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಸ್ವಾಮೀಜಿಯವರ ಚಾತುರ್ಮಾಸ್ಯ ಕಾರ್ಯಕ್ರಮದ ಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರು ಸೋಮವಾರ ದೆಹಲಿಯ ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ದೇವ ದರ್ಶನ ಹಾಗೂ ಗುರುಭಕ್ತಿ ಸಮರ್ಪಣೆ:
ಗುರುಕುಲಕ್ಕೆ ಆಗಮಿಸಿದ ಶ್ರೀ ನಿತಿನ್ ನಬಿನ್ ಅವರು ಮೊದಲು ಶ್ರೀ ರಾಮವಿಠಲ ಕೃಷ್ಣ ದೇವರ ಹಾಗೂ ಶ್ರೀ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಗುರುಭಕ್ತಿ ಸಮರ್ಪಿಸಿದರು.
ಉಭಯ ಕುಶಲೋಪರಿ ಹಾಗೂ ಮಕ್ಕಳೊಂದಿಗೆ ಸಂವಾದ:
ಈ ವೇಳೆ ಉಭಯ ನಾಯಕರು ಸ್ವಲ್ಪ ಹೊತ್ತು ಸೌಹಾರ್ದಯುತ ಮಾತುಕತೆ ನಡೆಸಿದರು. ನಂತರ ಶ್ರೀ ನಿತಿನ್ ನಬಿನ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಅಲ್ಲದೆ, ಗುರುಕುಲದ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರೊಂದಿಗೆ ಸಂಭಾಷಣೆ ನಡೆಸಿ, ಶುಭ ಸಂದೇಶ ನೀಡಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಾನ್ಸುರಿ ಸ್ವರಾಜ್, ರಾಮವೀರ್ ಸಿಂಗ್ ಬಿದೂರಿ, ಶಾಸಕ ಕೈಲಾಶ್ ಗೆಹ್ಲೋಟ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಗುರುಕುಲದ ಪ್ರಾಚಾರ್ಯರಾದ ಡಾ. ವಿಠೋಬಾಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ, ಕೃಷ್ಣ ಭಟ್, ಅಶ್ವಿನ್ ಕುಮಾರ್, ರಾಕೇಶ್ ಗೌರ್ ಮತ್ತು ವಿದ್ವಾನ್ ವಿಠಲ ಭಟ್ ಮೊದಲಾದವರು ನಿತಿನ್ ನಬಿನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
