ಹಾಸನ: ನಗರದ ಹಳೇ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಶ್ರೀ ಗಣಪತಿ ಪೆಂಡಾಲ್‌ನಲ್ಲಿ ಸೆಪ್ಟೆಂಬರ್ 24ರಂದು ಗುರುವಾರ ಸಂಜೆ 7 ಗಂಟೆಗೆ ಕಾವ್ಯ, ಗಾಯನ, ನೃತ್ಯ ಹಾಗೂ ಚಿತ್ರಕಲೆಗಳ ಅಪೂರ್ವ ಸಂಗಮವಾದ ‘ಕಾವ್ಯ ಗಾನ ನಾಟ್ಯ ಕುಂಚ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಇನ್ಸೂರೆನ್ಸ್ ಪುಟ್ಟೇಗೌಡ ಟ್ರಸ್ಟ್, ಶ್ರೀ ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ಹೊಯ್ಸಳ ಚಿತ್ರಕಲಾ ಪರಿಷತ್ (ಹಾಸನ) ಸಂಯುಕ್ತ ಆಶ್ರಯದಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಲಿದೆ.
ಕಾವ್ಯ ವಾಚನ: ಮಲ್ಲೇಶ್ ಜಿ., ಕಲಾವತಿ ಮಧುಸೂದನ್, ಗೊರೂರು ಅನಂತರಾಜು, ಸುಶೀಲಾ ಸೋಮಶೇಖರ್, ಶೈಲಜಾ ಹಾಸನ್, ಎಸ್.ಎಸ್. ಪುಟ್ಟೇಗೌಡ, ಜಿ.ಆರ್. ಶ್ರೀಕಾಂತ್, ವೈ.ಬಿ. ಕಾಂತರಾಜು, ಗಿರಿಜಾಂಬ ಬಾಳ್ಳುಪೇಟೆ ಹಾಗೂ ರಾಜೇಶ್ವರಿ ಹುಲ್ಲೇನಹಳ್ಳಿ ಅವರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದಾರೆ.
ಸಂಗೀತ ಮತ್ತು ಗಾಯನ: ವಾಚಿಸಲ್ಪಡುವ ಕವಿತೆಗಳಿಗೆ ರಾಗ ಸಂಯೋಜನೆ ಮಾಡಲಾಗಿದ್ದು, ಯೋಗೇಂದ್ರ ದುದ್ದ, ಶ್ರೀಕಾಂತ್, ಕಲಾವತಿ ಮಧುಸೂಧನ್, ಉಮಾ ವಿಶ್ವನಾಥ್ ಮತ್ತು ಶೋಭಾ ಹರೀಶ್ ಗಾಯನ ಪ್ರಸ್ತುತಪಡಿಸಲಿದ್ದಾರೆ.
ಲೈವ್ ಚಿತ್ರಕಲೆ: ಗಾಯಕರು ಹಾಡುಗಳನ್ನು ಪ್ರಸ್ತುತಪಡಿಸುವ ವೇಳೆ, ಪ್ರೇಕ್ಷಕರ ಎದುರಲ್ಲೇ ಕವಿಗಳ ಕಲ್ಪನೆಗೆ ತಕ್ಕಂತೆ ಚಿತ್ರಕಲಾವಿದರಾದ ದೇವರಾಜು, ಚಂದ್ರಪ್ರಭ, ಬಸವರಾಜು, ಶಿವಕುಮಾರ್, ಸ್ಪೂರ್ತಿ, ಸಿಂಚನ, ಯಶ್, ಬಸವರಾಜ್ ಭಗತ್ ಮತ್ತು ಹೇಮಲತಾ ಅವರು ಸುಂದರ ಚಿತ್ರಗಳನ್ನು ಬಿಡಿಸಿ ರಂಗು ತುಂಬಲಿದ್ದಾರೆ.
ನೃತ್ಯ ಪ್ರದರ್ಶನ: ಕಾರ್ಯಕ್ರಮದಲ್ಲಿ ಸ್ಮಿತಾ ಹೇಮೇಶ್ ಮತ್ತು ಸುನೀತಾ ಕಿರಣ್ ಅವರ ಆಕರ್ಷಕ ನೃತ್ಯ ಪ್ರದರ್ಶನವಿರಲಿದೆ.
ಕಲಾಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.
