ಅಂಬಿಕಾ ವಿದ್ಯಾಲಯದ ಸಾಧನೆ: ಚೆಸ್ ಹಾಗೂ ಅಥ್ಲೆಟಿಕ್ಸ್ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Shreya Hegde
0

 


ಪುತ್ತೂರುನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.. ಸಂಸ್ಥೆಯ ವಿದ್ಯಾರ್ಥಿಗಳು ಹೈದರಾಬಾದ್ ನಾದರ್ಗುಲ್ ವಿದ್ಯಾಭಾರತಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿಯ ಕ್ಷೇತ್ರಮಟ್ಟದ ಅಥ್ಲೆಟಿಕ್ಸ್ ಹಾಗೂ ಚೆಸ್ ಚಾಂಪಿಯನ್ಶಿಪ್ನಲ್ಲಿಅತ್ಯುತ್ತಮ ಸಾಧನೆ ಮೆರೆದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಈಯಶಸ್ಸಿನೊಂದಿಗೆ ಸಂಸ್ಥೆಯ ಬಾಲವರ್ಗದ ಬಾಲಕರ ಹಾಗೂ ಬಾಲಕಿಯರ ಚೆಸ್ ತಂಡ ಮತ್ತು ಕಿಶೋರ ಹಾಗೂ ಬಾಲವರ್ಗದ ಅಥ್ಲೆಟಿಕ್ಸ್ ತಂಡಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

 

ಅಥ್ಲೆಟಿಕ್ಸ್ ವಿಭಾಗದ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ತೆಂಕಿಲದ ಕೃಷ್ಣ ನಾಯಕ್ ಮತ್ತು ರಮ್ಯ ಕೃಷ್ಣ ಅವರ ಪುತ್ರಿ 10ನೇ ತರಗತಿಯ ಆರುಷಿ ಎನ್. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಉರ್ಲಾಂಡಿಯ ಮಹೇಶ್ ಜಿ. ಮತ್ತು ಸುಕನ್ಯಾ ಕೆ. ಅವರ ಪುತ್ರ 8ನೇ ತರಗತಿಯ ದೀಪಾಂಶ್ ಶೆಟ್ಟಿ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಇದೇ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಸುನಿಲ್ ರಾಜ್ ಮತ್ತು ಬಿ. ಬಿ. ವಿದ್ಯಾ ಅವರ ಪುತ್ರ 7ನೇ ತರಗತಿಯ ಆರಾಧ್ಯ ಗಣೇಶ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

 

ಚೆಸ್ ಬಾಲವರ್ಗದ ಬಾಲಕರ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ತಂಡದಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿಯ ಡಾ. ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ. ಶೈನಿ ಪಾಯಸ್ ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ಅರವಿಂದ ಕುಮಾರ್ ಕೆ. ಮತ್ತು ಜ್ಯೋತಿ ಕುಮಾರಿ ಕೆ. ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ಶ್ರೀನಿವಾಸ ಮಯ್ಯ ಡಿ. ಮತ್ತು ಜಯಲಕ್ಷ್ಮೀ ಎಸ್. ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್. ಮಯ್ಯ ಹಾಗೂ ಕಲ್ಲಾರೆಯ ಪ್ರವೀಣ್ ರೈ ಸಿ. ಮತ್ತು ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ಭಾಗವಹಿಸಿ ಸಾಧನೆ ಮಾಡಿದ್ದಾರೆ.

 


ಅದೇ ರೀತಿ ಚೆಸ್ ಬಾಲವರ್ಗದ ಬಾಲಕಿಯರ ವಿಭಾಗದಲ್ಲೂ ಶಾಲೆಯ ತಂಡವು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದೆ. ತಂಡದಲ್ಲಿ ಪೆರ್ನೆಯ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ., ಸಂಪ್ಯಾದ ರವಿಕುಮಾರ ಕೆ. ಮತ್ತು ಸುಮಿತ್ರ ಕೆ. ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ . ಆರ್., ದರ್ಬೆಯ ಕೆ. ಜಿ. ಮುರಳೀಧರ ಮತ್ತು ಕೆ. ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ. ಎಂ. ಶಮಿತ ಭಟ್ ಹಾಗೂ ಪಡೀಲ್ ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್ ಜಯಗಳಿಸಿದ್ದಾರೆ.

 

ಕ್ಷೇತ್ರಮಟ್ಟದ ಸ್ಪರ್ಧೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಸೂಕ್ತ ತರಬೇತಿ ನೀಡಿದ ಕ್ರೀಡಾ ತರಬೇತುದಾರರನ್ನು ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.

 

 

 

 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top