ಸುರತ್ಕಲ್: "ಬದುಕಿನ ಸಮಯವನ್ನು ಶಾಲೆ ಮತ್ತು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸವೆಸಿ, ತಾನು ಉರಿದು ಪರರ ಬೆಳಗುವ ಶಿಕ್ಷಕರ ಪರಿಶ್ರಮಕ್ಕೆ ಸದಾ ಅಭಾರಿಗಳಾಗಿರಬೇಕು" ಎಂದು ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ತಿಳಿಸಿದರು.
ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ (ರಿ) ಹೊಸಬೆಟ್ಟು ಸುರತ್ಕಲ್ ಹಾಗೂ ಮಂಗಳೂರಿನ ಕುಳಾಯಿ ಹೊಸಬೆಟ್ಟುವಿನ ಶ್ರೀ ಗುರುರಾಘವೇಂದ್ರ ಮಠದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ.ಪಿ. ರಾವ್, ವಿಶ್ವೇಶ್ವರ ಬದವಿದೆ, ಕೆ. ಕಲಾವತಿ, ರಾಘವೇಂದ್ರ ಎಚ್. ವಿ., ವಿಶ್ವೇಶ್ವರ ಕಾರಂತ್, ರಾಮಚಂದ್ರ ಹೆಬ್ಬಾರ್, ಬಿ. ದತ್ತಾತ್ರೇಯ, ಟಿ.ಎನ್. ರಮೇಶ್ ಹಾಗೂ ಶುಭಕರಣ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


