ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಒಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರು ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಓಣಂ ಕೇರಳದ ರಾಜ್ಯ ಹಬ್ಬವಾದರು, ಗಡಿನಾಡಿನ ನಾವೆಲ್ಲರೂ ಸೌಹಾರ್ದದಿಂದ ಆಚರಿಸುತ್ತೇವೆ. ದೇಶದ ಐಕ್ಯತೆಯನ್ನು ಬಲ ಪಡಿಸಲು ಗಡಿನಾಡಿನ ಜನರು ರಾಜ್ಯಗಳ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವುದು ಸೂಕ್ತ. ಸೌಹಾರ್ದ ಜೀವನ ಶೈಲಿ ನಮ್ಮ ಜೀವನಕ್ಕೆ ಮೆರುಗು ನೀಡುವುದು. ಅಖಂಡ ಭಾರತ ಸಂಕಲ್ಪ ವನ್ನು ನಾವು ಯಥಾವತ್ತಾಗಿ ಕಾಪಾಡಿಕೊಂಡು ಬರಬೇಕು ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು .
ವೇದಿಕೆಯಲ್ಲಿ ಕಾಲೇಜಿನ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಕಾರ್ಯದರ್ಶಿ ಡಾ.ಅಕ್ಷಯ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಡಾ ಅರ್ಪಿತ್ . ಟಿ. ಎ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಭಿಲಾಷ್ ಕ್ಷತ್ರಿಯ, IQAC ಸಂಯೋಜಕಿ ರಶ್ಮಿ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಶೋಕ ರೈ , ಒಣಂ ಕಾರ್ಯಕ್ರಮದ ಸಂಯೋಜಕಿ ಅನನ್ಯ ಭಟ್, ಲಲಿತ ಕಲಾ ಸಂಘದ ಸಂಯೋಜಕಿ ರಶ್ಮಿತಾ ಎಸ್, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸೂರ್ಯ, ಉಪಾಧ್ಯಕ್ಷೆ ರಕ್ಷಾ ಭಾಗವಹಿಸಿದರು. ಹಬ್ಬದ ಆಚರಣೆ ಅಂಗವಾಗಿ , ಚೆಂಡೆ ಮೇಳಂ & ವಿಶೇಷ ಆಕರ್ಷಣೆಯೊಂದಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪೂಕಳಂ ಸ್ಪರ್ಧೆಯ ವಿಜೇತರು:
ಪ್ರಥಮ:
ಆಂತರಿಕ ವಿನ್ಯಾಸ ವಿಭಾಗ
ದ್ವಿತೀಯ :
ಕಲಾ ವಿಭಾಗ
ತೃತೀಯ :
ಫ್ಯಾಷನ್ ಡಿಸೈನ್ ವಿಭಾಗ
ಹಗ್ಗ ಜಗ್ಗಾಟ ಸ್ಪರ್ಧೆಯ ವಿಜೇತರು :
ಪ್ರಥಮ : ವಾಣಿಜ್ಯ ವಿಭಾಗ
ದ್ವಿತೀಯ: ಬಿ. ಸಿ.ಎ ವಿಭಾಗ
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನವನೀತ ಪ್ರಸ್ತಾವನೆಗೈದು, ಕು.ಅರ್ಚನಾ ತೃತೀಯ ಬಿ. ಕಾಂ ಸ್ವಾಗತಿಸಿ, ಹರಿಪ್ರಸಾದ್ ತೃತೀಯ ಬಿ. ಎ ವಂದಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರ್ಷ ಮಲಯಾಳಂನಲ್ಲಿ ನಿರೂಪಿಸಿದರು.

.png)
