ಮೈಸೂರು ಎಷ್ಟೊಂದು ಸುಂದರ...

Upayuktha
0



ಪ್ರವಾಸವೆಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಲ್ಲ ಬದಲಾಗಿ ಹೊಸ ಸ್ಥಳಗಳನ್ನು ಅನ್ವೇಷಿಸುವುದು, ಅಲ್ಲಿನ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿ ಸೌಂದರ್ಯವನ್ನು ಅರಿಯುವುದುರ ಜೊತೆಗೆ ಹೊಸ ಅನುಭವಗಳನ್ನು ಪಡೆದುಕೊಳ್ಳುವುದು. ಇಂತಹ ಪ್ರವಾಸಗಳು ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಸಂತೋಷ ಮತ್ತು ಉಲ್ಲಾಸವನ್ನು ನೀಡುತ್ತವೆ. ಇತ್ತೀಚೆಗೆ ನಾನು ನನ್ನ ಗೆಳತಿಯರೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸ ಹೋಗಿದ್ದೆ. ಆ ಪ್ರವಾಸ ನನ್ನ ಜೀವನದಲ್ಲಿ ಮರೆಯಲಾಗದ ಒಂದು ಸುಂದರ ಅನುಭವ ನೀಡಿತು.


ಮೈಸೂರು ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧವಾದರು ಅಲ್ಲಿ ಸುತ್ತಲು ಪ್ರಾಕೃತಿಕ ತಾಣಗಳು ಇವೆ. ಅರಮನೆಗಳ ನಗರಿ, ಉದ್ಯಾನಗಳ ನಗರಿ ಎಂದೆಲ್ಲಾ ಕರೆಯಿಸಿಕೊಳ್ಳುವ ಮೈಸೂರನ್ನು ನೋಡಲು ಹೋಗುವ ದಿನ ಬಹಳ ಉತ್ಸಾಹವಿತ್ತು. ಬೆಳಗಿನ ಜಾವವೇ ಬಾಗಲಕೋಟೆಯಿಂದ ಮಿನಿ ಬಸ್ಸಲ್ಲಿ ಪ್ರಯಾಣ ಆರಂಭಿಸಿದ ನಾವು ದಾರಿಯುದ್ದಕ್ಕೂ ಕಾಣುತ್ತಿದ್ದ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ, ಸ್ನೇಹಿತೆಯೊಂದಿಗೆ ಅಂತ್ಯಾಕ್ಷರಿ ಹಾಡುತ್ತಾ ಸಾಗಿದ ಪಯಣದ‌ ದಣಿವು ನನ್ನ ಉತ್ಸಾಹದ ಮುಂದ ಮರೆಮಾಚಿತ್ತು.


ಮೈಸೂರಿಗೆ ತಲುಪಿದ ನಂತರ ಮೊದಲಿಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಅಲ್ಲೆ ರಸ್ತೆಯ ಬದಿಗಿದ್ದ ಹೋಟೆಲ್ ಒಂದರಲ್ಲಿ ಅಲ್ಪೋಪಹಾರದೊಂದಿಗೆ ಪೀಲ್ಟರ್ ಕಾಫಿ‌ ಹೀರಿ ಸಾಗಿದ್ದು ಅರಮನೆಯ ವೀಕ್ಷಣೆಗೆ. ಅಲ್ಲಿಯ ಭವ್ಯ, ಸುಂದರ ವಾಸ್ತುಶಿಲ್ಪ ನಮನ್ನು ಆಕರ್ಷಿಸಿತ್ತು ಅರಮನೆಯ ಎತ್ತರದ ಗೋಪುರಗಳು, ಸುಂದರ ಕೆತ್ತನೆಗಳು, ವಿಶಾಲವಾದ ಸಭಾಂಗಣಗಳು ಮತ್ತು ಕಲಾತ್ಮಕ ವಿನ್ಯಾಸಗಳು ನಮ್ಮ ಗಮನ ಸೆಳೆದವು. ಅರಮನೆಯ‌ ಗತವೈಭವದ ಇತಿಹಾಸವನ್ನು ತಿಳಿದುಕೊಂಡಾಗ ಮೈಸೂರಿನ ರಾಜಮನೆತನದ ಬಗ್ಗೆ ನಮಗೆ ಹೆಚ್ಚಿನ ಅರಿವಾಯಿತು. ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಂಡು, ಅಲ್ಲಿಯೇ ಕೆಲವು ರೀಲ್ಸಗಳಾದವು, ಒಬ್ಬೊಬ್ಬರು ತಮಗಿಷ್ಟದ ಭಂಗಿಯಲ್ಲಿ ಪೋಟೋ ತೆಗೆದುಕೊಂಡು‌ 


ನಂತರ ನಾವು ಸಾಗಿದ್ದು ಮೈಸಾಶೂರನ ಲೋಕಕಲ್ಯಾಣಕ್ಕಾಗಿ‌ ಸಧೇ ಬಡೆದ ಬೆಟ್ಟದಲ್ಲಿರು ಚಾಮುಂಡಿ‌ ತಾಯಿಯ ದರ್ಶನಕ್ಕೆ. ಬೆಟ್ಟದ ಮೇಲಿನಿಂದ ಮೈಸೂರು ಮಹಾನಗರದ ವಿಶಾಲವಾದ ದೃಶ್ಯವನ್ನು ನೋಡಿ ಕಣ್ಣತುಂಬಿಕೊಂಡೇವು . ಅಲ್ಲಿನ ತಂಪಾದ ಗಾಳಿ ಮತ್ತು ಸುತ್ತಮುತ್ತಲಿನ ಹಸಿರು ಪರಿಸರ ನಮ್ಮ ಮನಸ್ಸಿಗೆ ನೆಮ್ಮದಿ ನೀಡಿದಂತು ನಿಜ, ಪ್ರಸಾದ ಪುಳಿಯೊಗರೆ ಸವಿದು ನಂತರ ಕೆ.ಆರ್.ಎಸ್. ಅಣೆಕಟ್ಟು ಮತ್ತು ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡಿದೆವು. ಬೃಂದಾವನ ಉದ್ಯಾನವನದ ಹಸಿರು ಹುಲ್ಲುಗಾವಲುಗಳು, ವಿವಿಧ ಬಗೆಯ ಹೂವುಗಳು, ಅಲಂಕಾರಿಕ ಗಿಡಗಳು ಮತ್ತು ಸುಂದರವಾದ ದೀಪಾಲಂಕಾರಗಳು ನಮ್ಮನ್ನು ಮತ್ತಷ್ಟು ಆಕರ್ಷಿಸುವಂತೆ ಇದ್ದವು . ಸಂಜೆ ಸಮಯದಲ್ಲಿ ನಡೆದ ಸಂಗೀತ ಕಾರಂಜಿಯ ದೃಶ್ಯ ಅತ್ಯಂತ ಸುಂದರವಾಗಿತ್ತು . ನೀರಿನ ಚಿಮ್ಮಾಟದೊಂದಿಗೆ ಬೆಳಕು ಮತ್ತು ಸಂಗೀತದ ಸಂಯೋಜನೆ ನಮ್ಮ ಪ್ರವಾಸದ ಅತ್ಯಂತ ಸುಂದರ ಭಾಗವಾಗಿತ್ತು. ಜೊತೆಗೆ ನಾಲ್ಕು ಗಂಟೆ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಜಗತ್ತಿನ ವಿಧವಾದ ಪ್ರಾಣಿಗಳನ್ನು ಕಂಡಾಗ ಭಯದೊಂದಿಗೆ ಮೈ ರೋಮಾಂಚನ‌ವಾಯಿತು. ಕೇವಲ ಟಿವಿಯಲ್ಲಿ, ಪುಸ್ತಕದಲ್ಲಿ ನೋಡಿದ್ದ‌ ಪ್ರಾಣಿಗಳೆಲ್ಲ ಕಣ್ಣ್ಮುಂದೆ ಕಂಡಾಗ ಆನಂದವೇ- ಆನಂದ.


ಪ್ರವಾಸದ ಸಂದರ್ಭದಲ್ಲಿ ಮೈಸೂರಿನ ಪ್ರಸಿದ್ಧ ಆಹಾರ ಪದಾರ್ಥಗಳನ್ನು ಸವಿಯುವ ಅವಕಾಶವೂ ದೊರೆಯಿತು. ಮೈಸೂರು ಪಾಕ್ ಸೇರಿದಂತೆ ವಿವಿಧ ಸ್ಥಳೀಯ ಸಿಹಿತಿಂಡಿಗಳನ್ನು ರುಚಿಯ ಬಗ್ಗೆ ಹೇಳಲು ಪದಗಳೇ ಸಾಲದು . 


ಈ ಪ್ರವಾಸದ ಮೂಲಕ ಮೈಸೂರಿನ ಇತಿಹಾಸ, ಕಲೆ, ಸಂಸ್ಕೃತಿ, ಧಾರ್ಮಿಕ ಪರಂಪರೆ ಮತ್ತು ಪ್ರಕೃತಿ ಸೌಂದರ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಪುಸ್ತಕಗಳಲ್ಲಿ ಓದಿದ ವಿಷಯಗಳನ್ನು ನೇರವಾಗಿ ನೋಡಿದಾಗ ಅದರ ಮಹತ್ವ ಇನ್ನಷ್ಟು ಅರ್ಥವಾಯಿತು. ಸ್ನೇಹಿತೆಯೊಂದಿಗೆ ಕಳೆದ ಸಮಯ ನಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.


ಒಟ್ಟಿನಲ್ಲಿ, ಮೈಸೂರು ಪ್ರವಾಸವು ನನಗೆ ಜ್ಞಾನ, ಸಂತೋಷ, ನೆಮ್ಮದಿ ಮತ್ತು ಹೊಸ ಅನುಭವಗಳನ್ನು ನೀಡಿತು. ಪ್ರವಾಸ ಮುಗಿಸಿ ಮನೆಗೆ ಹಿಂದಿರುಗುವಾಗ ಮನಸ್ಸಿನಲ್ಲಿ ಸಂತೋಷದ ಜೊತೆಗೆ ಪ್ರವಾಸದೂದ್ದಕ್ಕು ನಮ್ಮ ಜಂಗಮವಾಣಿಯಲ್ಲಿ ಸೆರೆಹಿಡಿಯಲಾದ ಸಾವಿರಾರು ಛಾಯಾಚಿತ್ರಗಳಿದ್ದವು. ಬದುಕಿನಲ್ಲಿ ಜೀವನದಲ್ಲಿ ಎದರಾಗುವ ನೋವುಗಳನ್ನು ಮರೆಯುದಕ್ಕಾದರು, ಮನಸ್ಸಿನ ನೆಮ್ಮದಿಗಾದರು, ವಾತಾವರಣದ‌ ಬದಲಾವಣೆಗಾದರು‌ ಈ ತರಹದ ಪ್ರವಾಸ ಅತ್ಯಂತ ಅವಶ್ಯಕ ಅನಿಸಿತು.



-ಮಂಜುಳಾ ಹಳ್ಳೂರ

ಬಸವೇಶ್ವರ ಕಲಾ ಮಹಾವಿದ್ಯಾಲಯ 

ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ,ಬಾಗಲಕೋಟ 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top