ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಈ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಧ್ಯಾನೇಶ್ ಎಸ್, ರಿಥನ್ ಗೌಡ ಎಸ್. ಪಿ, ಶ್ರೀಶಾಂತ್, ಮೋಹಿತ್ ಬಿ . ಕೆ , ಭುವನ್ ಗೌಡ ಜಿ . ಎನ್ , ಡಿ . ವಿ ದೈವಿಕ್ ದರ್ಶನ್ , ಪವನ್ ಕುಮಾರ್ ಟಿ , ಲೋಕೇಶ್ ಕೆ . ಜಿ , ತಸ್ಮೈ ಪಿ ಗೌಡ, ದ್ವಿತೀಯ ಪಿಯುಸಿ ನಿಹಾನ್ ಶೆಟ್ಟಿ ವಿ ಆರ್ , ಉಜ್ವಲ್ ಮನೋಜ್ ತಾರಾ , ಚಿರಾಗ್ ಜಿ . ಯು , ಪವನ್ ವಿ . ವಿ , ಬಿ . ಜಿ ವಿಲಾಸ್ , ಗಗನ್ ಸಿ.ಎನ್ , ಶ್ರೀಶಾಂತ್ ಎಸ್ ಭಾಗವಹಿಸಿರುತ್ತಾರೆ .
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.


