ಮಂಗಳೂರು: ಕ್ವೆಸ್ಟ್ ಗ್ಲೋಬಲ್‌ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ವತಿಯಿಂದ, ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ (IEEE) ಇಂಡಿಯಾ ಫಿಲಾಂತ್ರಪಿ ವತಿಯಿಂದ ಐ ಟ್ರಿಪಲ್ ಇ -ಬೆಂಗಳೂರು ವಿಭಾಗದ ವುಮನ್ ಇನ್ ಎಂಜಿನಿಯರಿಂಗ್ ಅಫಿನಿಟಿ ಗ್ರೂಪ್ ಸಹಯೋಗದಲ್ಲಿ 2025 ಮತ್ತು 2026ನೇ ಸಾಲಿನ ಮಹಿಳಾ ಇಂಜಿನಿಯರಿಂಗ್ (WiE) ವಿದ್ಯಾರ್ಥಿವೇತನ ಪುರಸ್ಕೃತರಿಗಾಗಿ ನೇರ ಕಲಿಕಾ ಅಧಿವೇಶನ ಕಾರ್ಯಕ್ರಮ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ಪ್ರಿಯಾ ವಿ. ಫ್ರಾಂಕ್ ಅವರು ವಿದ್ಯಾರ್ಥಿವೇತನ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಪ್ರೊ. ಉದಯಕುಮಾರ್ ಶೆಣೈ ಅವರು ವಿದ್ಯಾರ್ಥಿಗಳು ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸುವ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿವೇತನ ಹಾಗೂ STEM ತರಬೇತಿಯ IEEE ಇಂಡಿಯಾ ಫಿಲಾಂತ್ರಪಿ ಸಂಯೋಜಕಿ ಶ್ರೀಮತಿ ಜೋಶೀನ್ ಮಾರ್ಟಿನ್ ಮತ್ತು ಶ್ರೀಮತಿ ರಕ್ಷಾ ಜೈನ್, ಎನ್‌ಐಟಿಕೆ ಸುರತ್ಕಲ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ.ಆರ್. ಚಂದಾವರ್ಕರ್ ಹಾಗೂ ಬೆಂಗಳೂರಿನ ಹಾರ್ಮನ್ ಇಂಟರ್‌ನ್ಯಾಷನಲ್ ಸಂಸ್ಥೆಯ ಹಿರಿಯ ಉತ್ಪನ್ನ ಎಂಜಿನಿಯರ್ ಶ್ರೀಮತಿ ಜಯಸುಧಾ ಬಿ.ಎಸ್.ಕೆ. ಅವರು ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಅಧಿವೇಶನಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಸಲಹೆಗಾರರಾದ ಅಶ್ವಿನಿ ಹೊಳ್ಳ ವಂದನಾರ್ಪಣೆ ನೆರವೇರಿಸಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದ ಕ್ವೆಸ್ಟ್ ಗ್ಲೋಬಲ್‌ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕಾ ವಿಭಾಗಕ್ಕೆ, IEEE ಇಂಡಿಯಾ ಫಿಲಾಂತ್ರಪಿ ವ್ಯವಸ್ಥಾಪಕ ಅಶೋಕ ವಿಟ್ಟಲ್, ವುಮನ್ ಇನ್ ಎಂಜಿನಿಯರಿಂಗ್ ಬೆಂಗಳೂರು ವಿಭಾಗದ ಅಫಿನಿಟಿ ಗ್ರೂಪ್ ಹಾಗೂ ಅತಿಥೇಯ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹಕಾರಕ್ಕಾಗಿ ವಂದಿಸಿದರು.
ಈ ನೇರ ಕಲಿಕಾ ಅಧಿವೇಶನದಲ್ಲಿ ವಿವಿಧೆಡೆಯ 14 ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ಒಟ್ಟು 35 ಮಂದಿ ವಿದ್ಯಾರ್ಥಿವೇತನ ಪುರಸ್ಕೃತರು ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

