ನಿನ್ನೊಳಗೆ ನಗುವಿರದೆ
ನೀ ಚಡಪಡಿಸುತಿರಲು,
ನಾನು ನಗುವಿನಲಿ ಇದ್ದೇನೆಂದು
ಹೇಗೆ ನೀ ತಿಳಿದೆ ಸಖಿ?
ನಿನ್ನ ಬಯಕೆಯೇ
ನನಗೆ ಆದೇಶವು;
ಹೇಳಿಬಿಡು ನನ್ನ ಸಖಿ—
ಏನಾದರಾಗಲಿ,
ನಿನ್ನ ಮನದಾಸೆ ನೆರವೇರಲಿ...
ಕ್ರೋಧದಲಿ ನೀ ಸಿಲುಕಿ
ಹೊರಬರದೆ ಇದ್ದರೆ,
ನನ್ನೊಳಗೂ ಜೀವಸೆಲೆ
ಬತ್ತುವುದಲ್ಲವೇ ಸಖಿ?
ಇದು ಇಂದು–ನಿನ್ನೆಯ ಬಂಧವಲ್ಲ,
ಜನ್ಮಜನ್ಮಾಂತರದ ಅನುಬಂಧ...
ಮರೆತೆ ಎಂದು
ಕ್ಷಣವಾದರೂ
ಹೇಗೆ ಅಂದುಕೊಂಡೆ ಸಖಿ?
ನಿನ್ನ ನಗುವಿನಲ್ಲಿಯೇ
ನನ್ನ ನಗುವಿದೆ,
ನಿನ್ನ ಸಂತೋಷದಲ್ಲಿಯೇ
ನನ್ನ ಬದುಕಿದೆ...
ನೀ ಮುನಿದರೆ
ನನ್ನ ಮನವೂ ಮೌನವಾಗುತ್ತದೆ;
ನೀ ನಕ್ಕರೆ ಮಾತ್ರ
ನನ್ನೊಳಗೆ ವಸಂತ ಅರಳುತ್ತದೆ...
— ಉಮೇಶ ಮುಂಡಳ್ಳಿ, ಭಟ್ಕಳ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

