ಬ್ರಿಟಿಷ್‌ ಸಿದ್ಧಾಂತವನ್ನು ಸರಿಸಿ ಭಾರತೀಯ ಪರಿಕಲ್ಪನೆಗೆ ಒತ್ತು ನೀಡೋಣ: ಕೃಷ್ಣಕುಮಾರ್ ಶೆಟ್ಟಿಕಡಬ

Upayuktha
0


ಪುತ್ತೂರು:
ಅನೇಕ ಕ್ರಾಂತಿ ವೀರರತ್ಯಾಗ,ಯುವಜನರ ಬಲಿದಾನ, ರಕ್ತದ ಅರ್ಪಣೆಯ ಪ್ರತಿರೂಪ ಸ್ವತಂತ್ರ್ಯ ಭಾರತ. ಸ್ವಾತಂತ್ರ್ಯ ದೊರಕಿ80 ವರ್ಷ ಕಳೆದರೂ ದೇಶದಲ್ಲಿ ಬ್ರಿಟಿಷರ ಸಿದ್ಧಾಂತ ಇಂದಿಗೂ ನಮ್ಮ ಆಡಳಿತಾತ್ಮಕ, ಸಾಂಸಕ್ಕøತಿಕ, ಶೈಕ್ಷಣಿಕ ವ್ಯವಸ್ಥೆಯನ್ನುಆವರಿಸಿಕೊಂಡಿದೆ. ಆದರೆ ಈ ಮನಸ್ಥಿತಿಯಿಂದ ಹೊರಬಂದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತೀಯ ಪರಿಕಲ್ಪನೆಗೆ ಹೆಚ್ಚು ಮಹತ್ವ ನೀಡುವ ಮುಖಾಂತರ ಅಭಿವೃದ್ಧಿಯ ಪಥದಲ್ಲಿ ಸಾಗುವಲ್ಲಿ ದೇಶದಜನತೆ ಶ್ರಮಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿಕಡಬ ಹೇಳಿದರು.


ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಾತನಾಡಿದರು.


ಭಾರತ ಇಂದು ತಾಂತ್ರಿಕ, ಆರ್ಥಿಕ, ಸಾಮಾಜಿಕ, ಉದ್ಯಮಕ್ಷೇತ್ರ, ಸಮಗ್ರ ಶಿಕ್ಷಣದ ಮೂಲಕ ಸಾಗುತ್ತಿದೆ.ಹಾಗಾಗಿ ನಾವು ವಿಕಸಿತ ಭಾರತದಕಲ್ಪನೆಗೆ ಹೆಚ್ಚು ಒತ್ತು ನೀಡುವುದರೊಂದಿಗೆ ಭಾರತವನ್ನು ಮುಂದುವರೆದ ದೇಶವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನರುಕೌಶಲ್ಯ ಅಭಿವೃದ್ಧಿ, ಉದ್ಯೋಗ,ವ್ಯಕ್ತಿತ್ವ ನಿರ್ಮಾಣದ ಮೂಲಕ ಸ್ವಸ್ಥ ಪರಿಸರವನ್ನು ನಿರ್ಮಾಣ ಮಾಡುವಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ವಿವಿಧ ಮಜಲುಗಳಲ್ಲಿ ದೇಶಕ್ಕೆಕೊಡುಗೆನ್ನು ನೀಡುತ್ತಾ ಬಂದಿದೆಎಂದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ "ವಿಕಸನ" ಇದರ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಾದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ವಿವೇಕಾನಂದ ಪದವಿಪೂರ್ವಕಾಲೇಜು, ವಿವೇಕಾನಂದಇಂಜಿನಿಯರಿಂಗ್‍ಕಾಲೇಜು, ವಿವೇಕಾನಂದತಾಂತ್ರಿಕ ವಿದ್ಯಾಲಯ, ವಿವೇಕಾನಂದಇನ್ ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್‍ಸೈನ್ಸಸ್, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇವುಗಳ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ - ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಎನ್.ಸಿ.ಸಿ, ಎನ್.ಎಸ್. ಎಸ್, ರೋವರ್ಸ್‍ಮತ್ತುರೆಂಜಾರ್ಸ್, ರೆಡ್‍ಕ್ರಾಸ್, ಘೋ‍‍ಷಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಪಿ. ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top