ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿಶಿಷ್ಟ ಕಾರ್ಯಕ್ರಮ: ಮಾಜಿ ಸೈನಿಕರೊಂದಿಗೆ ಸಮ್ಮಿಲನ, ಭೋಜನಕೂಟ

Upayuktha
0

ಪುತ್ತೂರು: ಶನಿವಾರ ದೇಶವೆಲ್ಲಾ ಸ್ವಾತಂತ್ರ್ಯದ ಹರ್ಷಾಚರಣೆಯಲ್ಲಿ ತೊಡಗಿದ್ದರೆ ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಕೇವಲ ಸಂಭ್ರಮಕ್ಕಷ್ಟೇ ಸೀಮತವಾಗದೆ ಒಂದು ಹೆಜ್ಜೆ ಮುಂದಿರಿಸಿ ವಿಶೇಷ ಕಾರ್ಯಕ್ರಮವೊಂದರ ಆಯೋಜನೆಯ ಮೂಲಕ ದೇಶಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ದೇಶದ ಸ್ವಾತಂತ್ರ್ಯವನ್ನು ರಕ್ಷಿಸಿದವರನ್ನು ಗೌರವಿಸುವ, ಆದರಿಸುವ ಮೂಲಕ ಸಮಾಜಕ್ಕೊಂದು ಸುಂದರ ಸಂದೇಶ ನೀಡಿವೆ.


ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಯೋಜಿಸುವ ಯೋಚನೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜರಿಗೆ ಮೂಡಿತು. ಪರಿಣಾಮ, ಭಾರತೀಯ ಸೇನೆ ಹಾಗೂ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪುತ್ತೂರು ತಾಲೂಕಿನ ವೀರಯೋಧರ ಸಮ್ಮಿಲನ ಕಾರ್ಯಕ್ರಮ ರೂಪುರೇಷೆ ಪಡೆಯಿತು.


ಪುತ್ತೂರಿನಲ್ಲಿ ದಕ್ಷಿಣ ಭಾರತದ ಮೊದಲ ಖಾಸಗಿ ಅಮರ್ ಜವಾನ್ ಜ್ಯೋತಿ ಸ್ಥಾಪಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ದೇಶ, ದೇಶಭಕ್ತಿ, ಭಾರತೀಯ ಸೇನೆಯೆಡೆಗಿನ ಅಭಿಮಾನಗಳೆಲ್ಲ ನಿತ್ಯ ಭಾವವಾಗಿ ಒಡಮೂಡಿದೆ. ಹಾಗಾಗಿ ದೇಶಕ್ಕಾಗಿ ತಮ್ಮ ತಾರುಣ್ಯವನ್ನು ನೀಡಿ‌ ನಾಗರಿಕರನ್ನು ರಕ್ಷಿಸಿದವರನ್ನು ಅವರ ಕುಟುಂಬ ವರ್ಗದೊಡನೆ ಆದರದಿಂದ ಬರಮಾಡಿಕೊಂಡು ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ, ಪ್ರತಿಯೊಬ್ಬರಿಗೂ ಸ್ಮರಣಿಕೆ ನೀಡಿ ಗೌರವಿಸಿ, ಭೋಜನಕೂಟ ಏರ್ಪಡಿಸಿ, ಈ ಬಾರಿಯ ಸ್ವಾತಂತ್ರೋತ್ಸವವನ್ನು ಸ್ಮರಣೀಯವಾಗುವಂತೆ ಮಾಡಲಾಯಿತು.


ನಮಗಾಗಿ ನಮ್ಮ ಹೆಮ್ಮೆಯ ಸೈನಿಕರು ಬದುಕನ್ನು ಸಮರ್ಪಿಸಿದ್ದಾರೆ. ನಮ್ಮ ತ್ರಿವರ್ಣ ಧ್ವಜ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಸೈನಿಕರ ಉಸಿರಿನಿಂದ. ಹಾಗಾಗಿ ನಾವೆಲ್ಲರೂ ಸೈನಿಕರ ಋಣದಲ್ಲಿದ್ದೇವೆ. ಆ ಋಣದಲ್ಲಿ ಕನಿಷ್ಟವನ್ನಾದರೂ ತೀರಿಸುವ ಪ್ರಯತ್ನ‌ಮಾಡಬೇಕಿದೆ. ಅದಕ್ಕಾಗಿ ನಮ್ಮ ಮಾಜಿ ಸೈನಿಕರನ್ನೆಲ್ಲಾ ಅವರ ಕುಟುಂಬ ವರ್ಗದೊಡನೆ ಆಹ್ವಾನಿಸಿ ಸಮ್ಮಿಲನ ಕಾರ್ಯಕ್ರಮ‌ನಡೆಸಿ ಭೋಜನ ಕೂಟ ಹಮ್ಮಿಕೊಳ್ಳಲಾಗಿದೆ ಎಂಬುದು ಅಂಬಿಕಾ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜರ ಮಾತು.


ಸಭಾ ಕಾರ್ಯಕ್ರಮ : ಭೋಜನಕೂಟಕ್ಕೂ ಪೂರ್ವದಲ್ಲಿ ಸಮ್ಮಿಲನದ ಅಂಗವಾಗಿ ಸಭಾ ಕಾರ್ಯಕ್ರಮ‌ ನಡೆಯಿತು. ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್, ಗಡಿ ಭದ್ರತಾ ಪಡೆಯ ಮಾಜಿ ಸೈನಿಕರ ಸಂಘದ ಮುಖ್ಯಸ್ಥ ಚಂದಪ್ಪ ಮೂಲ್ಯ, ಕರ್ನಲ್ ಡಿ.ಜಿ.ಭಟ್ ಅನಿಸಿಕೆ ವ್ಯಕ್ತ ಪಡಿಸಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಬಾಲಕೃಷ್ಣ ಬೋರ್ಕರ್,


ನೂರಾರು ಮಂದಿ ಮಾಜಿ ಯೋಧರು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾಜಿ ಸೈನಿಕರೆಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top