ಮಂಗಳೂರಿನ ಶಕ್ತಿ ವಿಧ್ಯಾ ಕೇಂದ್ರದ ಈಜು ಕೊಳದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಸ್ಫರ್ಧೆ 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಶ್ರೀರಾಮ ಪ್ರೌಢ ಶಾಲೆ ಕಲ್ಲಡ್ಕ ಇಲ್ಲಿನ ವಿಧ್ಯಾರ್ಥಿನಿ ಅನನ್ಯ ಎ ಆರ್ .200ಮೀ ಬಟರ್ಫ್ಲೈ ಯಲ್ಲಿ ಚಿನ್ನ, 50 ಮೀ ಮತ್ತು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಪಡೆದು ದಿನಾಂಕ 22.8.2026 ರಂದು ಬೆಂಗಳೂರಿನ ಥಣಿಸಂದ್ರ ದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿರುತ್ತಾರೆ.
ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿ ಕೆ ನಾಯ್ಕ್ ರವರ ಶಿಷ್ಯೆಯಾಗಿದ್ದು ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತುದಾರದ ಲೋಕರಾಜ್ ವಿಟ್ಲ, ತರಬೇತು ದಾರರಾದ ಸಂಜಯ್ ಮತ್ತು ಗಗನ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.ಅಶೋಕ್ ಕುಮಾರ್ ಬರಿಮಾರು ಮತ್ತು ರೋಹಿಣಿ . ಬಿ ಇವರ ಪುತ್ರಿ ಯಾಗಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

