ಹುನಗುಂದ: ಬಾಗಲಕೋಟೆ ಜಿಲ್ಲಾ ಆಡಳಿತದಿಂದ ಶನಿವಾರ ನಡೆದ ಜಿಲ್ಲಾ ಮಟ್ಟದ ೮೦ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಗರದ ಇಬ್ಬರು ಹಿರಿಯರಾದ ಜಿ.ಬಿ.ಕಂಬಾಳಿಮಠ ಮತ್ತು ಸಂಗು ಮಠ(ಬನ್ನಿಹಟ್ಟಿ) ಜಿಲ್ಲಾ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರ ವಿಭಾಗದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಗಳ ಗೌರವ ಸನ್ಮಾನ ಪಡೆದರು.
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಗೌರವಿಸಿದರು.
ಬಾಗಲಕೋಟೆ ಶಾಸಕ ಉಮೇಶ ಮೇಟಿ, ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಬಿ.ಟಿ.ಡಿ.ಎ.ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿ.ಬಿ.ಕಂಬಾಳಿಮಠ ಹಿರಿಯ ಚಿತ್ರ ಕಲಾವಿದ, ಲೇಖಕ ಹಾಗೂ ಜನಪರ ಹೋರಾಟಗಾರರು. ಇವರ ಜನಪರ ಕಾಳಜಿಯ ಲೇಖನಗಳು ನಾಡವರ ಗಮನ ಸೆಳೆದಿವೆ. 'ಜನಮುಖಿ' ಮತ್ತು 'ಸಕಾರಾತ್ಮಕದೆಡೆಗೆ'ಎಂಬ ಎರಡು ಕೃತಿಗಳು ಪ್ರಕಟವಾಗಿವೆ. ಹುನಗುಂದದ ಅಭಿವೃದ್ದಿಗೆ ಸದಾ ಶ್ರಮಿಸುವ ಹಿರಿಯ ಜೀವಿ. ಇವರನ್ನು ಸಾಹಿತ್ಯ ಮತ್ತು ಚಿತ್ರಕಲೆ ವಿಭಾಗದಲ್ಲಿ ಗುರುತಿಸಿ ಗೌರವ ನೀಡಲಾಯಿತು.
ಇನ್ನೋರ್ವ ಸಾಧಕ ಸಂಗು ಮಠ ಸಮೀಪದ ಬನ್ನಿಹಟ್ಟಿ ಗ್ರಾಮದವರು. ನಿವೃತ್ತ ಶಿಕ್ಷಕರಾದ ಇವರು ಕೆಲವು ವರ್ಷ ಉಷಾಕಿರಣ, ವಿಜಯ ಕರ್ನಾಟಕ ಮತ್ತು ಕನ್ನಡ ಪ್ರಭ ಪತ್ರಿಕೆಗಳ ಹುನಗುಂದ ವರದಿಗಾರರಾಗಿಯೂ ಕಾರ್ಯ ಮಾಡಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ಹಂತದಿಂದ ರಂಗಭೂಮಿಯಲ್ಲಿ ಶ್ರಮಿಸಿದ ಇವರು ಧ್ರುವರಂಗದ ಬಹುತೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗವಹಿಸಿದ ಕೀರ್ತಿ ಇವರದು. ಇವರನ್ನು ರಂಗಭೂಮಿ ಕ್ಷೇತ್ರದಲ್ಲಿ ಗೌರವಿಸಲಾಯಿತು.
ಇವರನ್ನು ನಗರದ ಸಾಂಸ್ಕೃತಿಕ ಹಾಗೂ ಪತ್ರಿಕಾ ಸಂಘಟನೆಗಳು ಅಭಿನಂದಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

