ಬಂಪರ್ ಆಫರ್! ಬಂಪರ್ ಆಫರ್! (ಸರಕಾರಿ ಜಾಹೀರಾತು)
ನಿಮ್ಮ ಕನಸಿನ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಸುವರ್ಣ ಅವಕಾಶ!’ ರಾಜ್ಯ ಸರ್ಕಾರದ ಹೆಮ್ಮೆಯ ಕೊಡುಗೆ. ಪಾರ್ಕ್ ಸೇಲ್ ಅಭಿಯಾನ- 2026
ಬೆಂಗಳೂರು ಸೇರಿದಂತೆ ರಾಜ್ಯದ ಸಮಸ್ತ ಜನತೆಗೆ ಸುವರ್ಣಾವಕಾಶ! ಹಸಿರಿನಿಂದ ಕಂಗೊಳಿಸುತ್ತಿರುವ ನಮ್ಮ ಉದ್ಯಾನವನಗಳಲ್ಲಿ ಇನ್ಮುಂದೆ ಕೇವಲ ವಾಕಿಂಗ್ ಮಾತ್ರವಲ್ಲ, ರಿಯಲ್ ಎಸ್ಟೇಟ್ ವ್ಯವಹಾರವೂ ಭರ್ಜರಿಯಾಗಿ ನಡೆಯಲಿದೆ! ಸರ್ಕಾರದ ಹೊಸ ತಿದ್ದುಪಡಿ ಮಸೂದೆಯ ಅನ್ವಯ, ನಿಮ್ಮ ಅಕ್ಕಪಕ್ಕದ ಪಾರ್ಕುಗಳ ಶೇ. 5ರಷ್ಟು ಜಾಗ ಈಗ ನೇರ ಮಾರಾಟ, ಗುತ್ತಿಗೆ ಹಾಗೂ ಉಡುಗೊರೆಗೆ ಲಭ್ಯವಿದೆ!
ಪಾರ್ಕ್ ಸೇಲ್ ಯೋಜನೆಯ ವಿಶೇಷತೆಗಳು:
'ಫಸ್ಟ್ ಕಮ್, ಫಸ್ಟ್ ಸರ್ವ್' ಆಧಾರದ ಮೇಲೆ: ಪಾರ್ಕಿನ ಅತ್ಯಂತ ಸುಂದರವಾದ ಮೂಲೆಗಳನ್ನು ಮೊದಲು ಬರುವವರಿಗೆ ಬಿಟ್ಟುಕೊಡಲಾಗುತ್ತದೆ!
ಮರಗಳೊಂದಿಗೆ ಫ್ರೀ ಗಿಫ್ಟ್: ಶೇ. 5ರ ಜಾಗ ಖರೀದಿಸಿದರೆ ಜೊತೆಗೆ ಹಳೆಯ ಮರಗಳನ್ನು ಉಚಿತವಾಗಿ ಕಡಿದು ಮಾರಿಕೊಳ್ಳುವ ಸೌಲಭ್ಯ!
ಆಮ್ಲಜನಕಕ್ಕೆ ಗುಡ್‌ಬೈ: ಇನ್ನುಮುಂದೆ ಶುದ್ಧ ಗಾಳಿಗಾಗಿ ಪಾರ್ಕಿಗೆ ಬರುವ ಅಗತ್ಯವಿಲ್ಲ, ನೇರವಾಗಿ ಹವಾನಿಯಂತ್ರಿತ (AC) ಕೊಠಡಿಗಳಲ್ಲಿ ಕುಳಿತುಕೊಳ್ಳಬಹುದು.
ಸಿಮೆಂಟ್ ರಸ್ತೆಗಳು ಮತ್ತು ವಾಹನಗಳ ದಟ್ಟಣೆಯ ಮಧ್ಯೆ ಬಿಸಿಲಿನ ತಾಪವನ್ನು ಸಂಪೂರ್ಣವಾಗಿ ಆನಂದಿಸಿ!
ದೂರದೃಷ್ಟಿಯಿಲ್ಲದ ಹೆಜ್ಜೆಯೊಂದಿಗೆ ನಿಮ್ಮ ನೆರೆಹೊರೆಯ ಹಸಿರನ್ನು ನಾಶ ಮಾಡಲು ಇಂದೇ ಧಾವಿಸಿ!
ಪ್ರಕಟಣೆ : ಪರಿಸರ ಮತ್ತು ಭೂ ಮಾರಾಟ ಇಲಾಖೆ, ಕರ್ನಾಟಕ ಸರಕಾರ.
***
5% ಯಾಕೆ? 50% ಮಾರಬಹುದು! ಇನ್ನೊಂದು ಐದು ವರ್ಷ ಆದ ಮೇಲೆ ಉಳಿದ 50% ಮಾರಬಹುದು!
ಉದ್ಯಾನ ನಗರಿಯನ್ನು ಅದ್ವಾನ ನಗರಿ ಮಾಡಬಹುದು!!.
ಗಾರ್ಡನ್ ಸಿಟಿಯನ್ನು ಗಾರ್ಡನ್ ಲೆಸ್ ಸಿಟಿ ಮಾಡಬಹುದು!!
ಪರಿಸರ ಜ್ಞಾನ, ಪರಿಸರದ ವಿಜ್ಞಾನ, ಅದರ ಗಂಧ ಗಾಳಿ, ವಿವೇಕ, ಯೋಗ್ಯತೆ ಅರಿವುಗಳು ಇಲ್ಲದವರನ್ನು ಅಧಿಕಾರದಲ್ಲಿ ಇರಿಸಿದರೆ ಇಷ್ಟೇ ಆಗುವುದು.
ಹೇಸಿಗೆಯ ಹಣಕ್ಕಾಗಿ ಏನು ಬೇಕಾದರು ಮಾಡ್ತಾರೆ.
ಆಡಳಿತ ಪಕ್ಷದವರು, ಸಿಗುವ ಹೇಸಿಗೆಯಲ್ಲಿ ಅರ್ಧ ನಿಮಗೂ ಬಿಸಾಕುತ್ತೇವೆ ಅಂದರೆ... ವಿರೋಧ ಪಕ್ಷದವರು ಆ ವಿಷಯಕ್ಕೆ ವಿರೋಧವನ್ನೂ ವ್ಯಕ್ತಪಡಿಸುವುದಿಲ್ಲ!!
5% ಉದ್ಯಾನಗಳನ್ನು ಮಾರುವ ಐಡಿಯಾ ಕೊಟ್ಟವರಿಗೆ ಈ ಬಾರಿಯ ಜ್ಞಾನಪೀಠ ಪ್ರಶಸ್ತಿಕೊಟ್ಟು, ಲಾಲ್‌ಬಾಗ್‌ನಲ್ಲಿ ಒಂದು ಸನ್ಮಾನ ಮಾಡಬೇಕು ಎಂದು ನಾನು ಈ ಮೂಲಕ ಘನ ಸರಕಾರವನ್ನು ಒತ್ತಾಯಿಸುತ್ತೇನೆ.
ಸನ್ಮಾನಿತರಿಗೆ ಲಾಲ್‌ಬಾಗ್‌ನ 5% ಜಾಗವನ್ನು ಉಡುಗೋರೆಯಾಗಿ ಕೊಡಬಹುದು!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

