ನವದೆಹಲಿ: ದೇಶದ ಪ್ರತಿಷ್ಠಿತ ಜೆಎನ್ ಯು (ಜವಾಹರ ಲಾಲ್ ನೆಹರೂ ಯುನಿವರ್ಸಿಟಿ) ಯಲ್ಲಿ ಕೊರಿಯನ್ ಭಾಷೆಯ ಕುರಿತು ಅಧ್ಯಯನ ನಡೆಸುತ್ತಿರುವ ಬಿಹಾರದ ಮುಜಫರ್ಪುರ ಮೂಲದ ವಿದ್ಯಾರ್ಥಿ ಅಮನ್ ಕುಮಾರ್ ಮಂಗಳವಾರ ಪೂಜ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವಿದ್ಯಾರ್ಥಿ ಉನ್ನತ ವ್ಯಾಸಂಗಕ್ಕಾಗಿ ಬುಧವಾರ ದಕ್ಷಿಣ ಕೊರಿಯ ದೇಶಕ್ಕೆ ತೆರಳಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರು ಕೊರಿಯನ್ ಅಕ್ಷರಗಳಲ್ಲಿ ಸ್ವಾಮೀಜಿಯವರ ಹೆಸರನ್ನು ಸ್ಥಳದಲ್ಲೇ ಬರೆದು ಅರ್ಪಿಸಿದರು. ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಆತನ ಉನ್ನತ ವ್ಯಾಸಂಗಕ್ಕೆ ಶುಭವನ್ನು ಕೋರಿ ಆಶೀರ್ವದಿಸಿದರು. ಆತನ ಹೆತ್ತವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

