ದೇವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ: ಅನಂತ ಪದ್ಮನಾಭ ಅಸ್ರಣ್ಣ

Upayuktha
0

ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶಿಲಾನ್ಯಾಸ



ಸುರತ್ಕಲ್: ದೇವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಗ್ರಾಮಸ್ಥರ ಸಹಮತದಿಂದ ದೇವಳದ ಸಾನಿಧ್ಯ ವೃದ್ದಿಯಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ನುಡಿದರು.


ಅವರು ಪುನರ್ ನಿರ್ಮಾಣಗೊಳ್ಳಲಿರುವ ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಷ್ಟಿ ಕಾಣಿಕೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವರ ಕೆಲಸವನ್ನು ಎಲ್ಲರೂ ಸಮಾನ ಮನಸ್ಸಿನ ಮೂಲಕ ಒಗ್ಗಟ್ಟಿನಿಂದ ಮಾಡಿದರೆ ಶೀಘ್ರವಾಗಿ ಪರಿಪೂರ್ಣ ಸಾನಿಧ್ಯ ನಿರ್ಮಾಣವಾಗುತ್ತದೆ ಎಂದರು.


ಮುಖ್ಯ ಅತಿಥಿಯಾಗಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ನಮ್ಮ ಸುತ್ತಲಿನ ಬದುಕಿನೊಂದಿಗೆ ನಮ್ಮ ಪರಂಪರೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅನುಭವಗಳಿಗೆ ಕಲ್ಪನೆ ಮತ್ತು ಸೃಜನ ಶೀಲತೆಯ ಸ್ವರ್ಶ ನೀಡಿದಾಗ ಉತ್ತಮವಾದ ದೇವಸ್ಥಾನ ನಿರ್ಮಾಣವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಂಬಯಿ ವಿ.ಕೆ,ಸಮೂಹ ಸಂಸ್ಥೆಯ ಸಿ.ಎಂ.ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಮಾತನಾಡಿ, ಇಲ್ಲಿನ ಯುವಕರ ಒಗ್ಗಟ್ಟು ಮತ್ತು ಹಿರಿಯರ ಮಾರ್ಗದರ್ಶನದಿಂದ ಈ ದೇವಸ್ಥಾನವು ಮಾದರಿ ದೇವಸ್ಥಾನವಾಗಿ ಮೂಡಿ ಬರಲಿದೆ. ಇದರಿಂದ ಇಡೀ  ಗ್ರಾಮವು ಬೆಳಗಲಿದೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ  ನೀಡಿದರು.


ವೇದಿಕೆಯಲ್ಲಿ ಶಿಬರೂರು ವಾಸುದೇವ ತಂತ್ರಿ, ಹಯವದನ್ ಭಟ್ ಕೈಯೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಕೃಷ್ಣಮೂರ್ತಿ ಭಟ್ ಮಧ್ಯ, ಗಡಿ ಪ್ರಧಾನರಾದ ಶಂಕರ ಹೆಗಡೆ ಮಧ್ಯ, ಮುಂಬಯಿ ಉದ್ಯಮಿ ಮೋಹನ್ ಚೌಟ ಮಧ್ಯ, ಮುಂಬಯಿ ಉದ್ಯಮಿ ಡಿ.ಕೆ,ಶೆಟ್ಟಿ ಸೂರಿಂಜೆ, ಉದ್ಯಮಿ ಯತೀಶ್ ರೈ ಚೆಲ್ಯಡ್ಕ, ಮಹಾಬಲ ಪೂಜಾರಿ ಕಡಂಬೋಡಿ, ರಾಜಾರಾಮ್ ಸಾಲ್ಯಾನ್ ಪಡುಪದವು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚೇಳೈರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ! ಜ್ಯೋತಿ ಚೇಳೈರು, ಕಾಟಿಪಳ್ಳ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್, ಮಾಧವ ಶೆಟ್ಟಿ ಕಾಟಿಪಳ್ಳ, ಕರುಣಾಕರ ಶೆಟ್ಟಿ ಪಡುಪದವು, ಮನೋಹರ ಅಂಚನ್ ಪಡುಪದವು ಉಪಸ್ಥಿತರಿದ್ದರು.


ಚಾಮುಂಡೆಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಕುಲ್ಲಂಗಾಲು, ರಾಘವ ಶೆಟ್ಟಿ ಕುಲ್ಲಂಗಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ ಕುಲ್ಲಂಗಾಲು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ,  ಮೋಹಿನಿ ಶೆಟ್ಟಿ ಮುಂಬಯಿ, ಮಹಿಳಾ ಸಮಿತಿ ಅಧ್ಯಕ್ಷೆ ಪೂರ್ಣಿಮ ಯತೀಶ್ ರೈ, ಪ್ರಸಾದ್ ಶೆಟ್ಟಿ ಕುಲ್ಲಂಗಾಲು, ಪ್ರಕಾಶ್ ಶೆಟ್ಟಿ ಕುಲ್ಲಂಗಾಲು, ರಾಧಾಕೃಷ್ಣ ಭಂಡಾರ್ಕರ್, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಶೆಟ್ಟಿ ಪಕ್ಕಳ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುಷ್ಷರಾಜ್ ಕಣ್ವತೀರ್ಥ, ಕೋಶಾಧಿಕಾರಿ ಹರೀಶ್ ಭಂಡಾರಿ ಭಾಗವಹಿಸಿದ್ದರು. ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು. ಲೋಕನಾಥ್ ಭಂಡಾರಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು ಶೇಖರ ದೇವಾಡಿಗ ಪ್ರಾರ್ಥಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top