ಸಾಲೆತ್ತೂರು ಬಂಟರ ಸಂಘದ ಕ್ರೀಡೋತ್ಸವದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗಳಿಗೆ ಸನ್ಮಾನ

Upayuktha
0



ಮಂಗಳೂರು: ಬಂಟರ ಸಂಘ ಸಾಲೆತ್ತೂರು ವಲಯದ ವತಿಯಿಂದ ಜರಗಿದ "ಬಂಟರ ಕ್ರೀಡೋತ್ಸವ ಮತ್ತು ಪ್ರತಿಭಾ ಪುರಸ್ಕಾರ" ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ದಿವ್ಯ ವಸಂತ ಶೆಟ್ಟಿ, ಜಗನ್ನಾಥ ಚೌಟ ಬದಿಗುಡ್ಡೆ, ಭುಜಂಗ ರೈ ಪಡಾರುಗುತ್ತು, ಶ್ರೀಮತಿ ಸುಜಾತ ರೈ ಕಲ್ಲಡ್ಕ, ಡಾ. ಪೂವಪ್ಪ ಶೆಟ್ಟಿ ಅಳಕೆ, ಲಕ್ಷ್ಮೀಶ ರೈ ಎರ್ಮೆನಿಲೆ, ರಮೇಶ್ ಶೆಟ್ಟಿ ಕುಡ್ತಮುಗೇರು, ವಿದ್ಯಾಧರ ರೈ ಚೆoಬರಡ್ಕ, ಗೋಪಾಲಕೃಷ್ಣ ಶೆಟ್ಟಿ ಪುದ್ದೋಟ್ಟು ಇವರುಗಳು ಆಗಮಿಸಿದ್ದರು.


ಕಾರ್ಯಕ್ರಮದಲ್ಲಿ ಸಾಲೆತ್ತೂರು ವಲಯ ಬಂಟರ ಸಂಘದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಚಾಲಕರು ಮತ್ತು ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ್ ಶೆಟ್ಟಿ ತಿರುವಾಜೆ, ಬಂಟ್ವಾಳ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ ರೈ ಕುಳಾಲು, ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ, ಅಧ್ಯಕ್ಷ ಉದಯಕುಮಾರ್ ರೈ ಅಗರಿ, ಉಪಾಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಮಹಿಳಾ ಗೌರವಾಧ್ಯಕ್ಷರಾದ ಗಾಯತ್ರಿ ಎಸ್ ರೈ ಕೊಲ್ಲಾಡಿ, ಅಧ್ಯಕ್ಷರಾದ ಸುನಿತಾ ಯು ರೈ ಗೌರಿಕೋಡಿ, ಕಾರ್ಯದರ್ಶಿ ವಿನುತಾ ಎ ಶೆಟ್ಟಿ ಕೊಲ್ಲಾಡಿ  ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top