ರಾಜ್ಯ ಮಟ್ಟದ ಈಜು ಸ್ಪರ್ಧೆ: ಪುತ್ತೂರು ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Upayuktha
0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವು ಪದಕಗಳನ್ನು ಗಳಿಸಿದ್ದಾರೆ.


ಪರ್ಲಡ್ಕದ ಉಮಾಶಂಕರ್ ನಾಯಕ್ ಕೆ. ಮತ್ತು ರಶ್ಮಿ ಅವರ ಪುತ್ರ, ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಲಲನ್ ಯು. ನಾಯಕ್ ಅವರು 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೂರನೇ ಸ್ಥಾನ, 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೊದಲನೇ ಸ್ಥಾನ ಹಾಗೂ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎರಡನೇ ಸ್ಥಾನ ಗಳಿಸಿದರೆ, ಹಾರಾಡಿಯ ಮಧುಸೂದನ್ ಸಾಲೆ ಮತ್ತು ವಿನುತಾ ಎಂ. ಸಾಲೆ ಅವರ ಪುತ್ರ, 10ನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ ಅವರು 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೊದಲನೇ ಸ್ಥಾನ ಹಾಗೂ 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೂರನೇ ಸ್ಥಾನ ಪಡೆದರು. ಪುತ್ತೂರಿನ ರವಿಕುಮಾರ್ ಕೊಠಾರಿ ಮತ್ತು ಕೊಠಾರಿ ಲಕ್ಷ್ಮೀ ಬೆನ್ ರವಿಕುಮಾರ್ ಅವರ ಪುತ್ರಿ, ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಮೆಹೆಕ್ ರವಿಕುಮಾರ್ ಕೊಠಾರಿ ಅವರು 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೊದಲನೇ ಸ್ಥಾನ ಹಾಗೂ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎರಡನೇ ಸ್ಥಾನ ಹಾಗೂ ದರ್ಬೆಯ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ಪ್ರತಿಮಾ ಅವರ ಪುತ್ರಿ, 8ನೇ ತರಗತಿಯ ರೀಶಾ ಪಿ. ಶೆಟ್ಟಿ ಅವರು 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೂರನೇ ಸ್ಥಾನ ಪಡೆದರು. ಪರ್ಲಡ್ಕದ ಸತ್ಯನಾರಾಯಣ ಮತ್ತು ಲತಾ ಕೆ. ಅವರ ಪುತ್ರ, ಬಾಲ ವರ್ಗದ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಪ್ರತ್ಯುಷ್ ಎಲ್. ಎಸ್. ಗೌಡ ಅವರು 50 ಮೀಟರ್ ಬ್ಯಾಕ್‌ಸ್ಟ್ರೋಕ್ ಹಾಗೂ 50 ಮೀಟರ್ ಬಟರ್‌ಫ್ಲೈಯಲ್ಲಿ ಮೊದಲನೇ ಸ್ಥಾನ, 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು.


 4×100 ಮೀಟರ್ ಫ್ರೀಸ್ಟೈಲ್ ರಿಲೇ ಹಾಗೂ 4×100 ಮೀಟರ್ ಮೆಡ್ಲಿ ರಿಲೇಯಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ. ಹಾಗೂ ಉರ್ಲಾಂಡಿಯ ಮಹೇಶ್ ಜಿ. ಮತ್ತು ಸುಕನ್ಯಾ ಕೆ. ಅವರ ಪುತ್ರ, 8ನೇ ತರಗತಿಯ ದೀಪಾಂಶ್ ಶೆಟ್ಟಿ ಅವರು 50 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೊದಲನೇ ಸ್ಥಾನ, 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಎರಡನೇ ಸ್ಥಾನ ಹಾಗೂ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೂರನೇ ಸ್ಥಾನ ಗಳಿಸಿದರು. 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಮೊದಲನೇ ಸ್ಥಾನ ಪಡೆದರು. ಮತ್ತು ಸಾಮೇತಡ್ಕದ ಜಯರಾಮ ಕೆ.ಟಿ. ಮತ್ತು ಸ್ವಾತಿ ಜಯರಾಮ್ ಅವರ ಪುತ್ರ, 6ನೇ ತರಗತಿಯ ಶ್ರೀಹಾನ್ ಗೌಡ ಕೆ.ಜೆ. ಅವರು 200 ಮೀಟರ್ ಬ್ಯಾಕ್‌ಸ್ಟ್ರೋಕ್ ಹಾಗೂ 100 ಮೀಟರ್ ಬಟರ್‌ಫ್ಲೈಯಲ್ಲಿ ಮೂರನೇ ಸ್ಥಾನ ಪಡೆದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top