ಆ.31: ವಿವೇಕಾನಂದ ಪಿಯು ಕಾಲೇಜಿನಲ್ಲಿ ನೂತನ ಕಂಪ್ಯೂಟರ್‍ ಪ್ರಯೋಗಾಲಯ-ಸ್ಮಾರ್ಟ್ ಕ್ಲಾಸ್‍ರೂಮ್‍ಗಳ ಉದ್ಘಾಟನೆ

Upayuktha
0

 


  • ಆಗಸ್ಟ್ 31 ರಂದು ಸ್ಮಾರ್ಟ್‍ಕ್ಯಾಂಪಸ್ ಪರಿಕಲ್ಪನೆಯಡಿಯಲ್ಲಿ ನಿರ್ಮಿಸಲಾದ ಲ್ಯಾಬ್ ಹಾಗೂ ತರಗತಿ ಕೊಠಡಿಗಳ ಲೋಕಾರ್ಪಣೆ
  • ಕಂಪ್ಯೂಟರ್ ಸೈನ್ಸ್ ತರಗತಿಗಳ ಜೊತೆಗೆಜೆಇಇ ನೀಟ್‍ಅಣಕು ಪರೀಕ್ಷೆಗಳಿಗಾಗಿ ಸಿದ್ಧಪಡಿಸಲಾದ ವಿಶಾಲವಾದಪ್ರಯೋಗಾಲಯಗಳು 
  • ಆಧುನಿಕತಂತ್ರಜ್ಞಾನದೊಂದಿಗೆ ಬೋಧನೆ ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಸುಸಜ್ಜಿತ ಕೊಠಡಿಗಳು 


ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಕಂಪ್ಯೂಟರ್‍ ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್‍ರೂಮ್‍ಗಳ ಉದ್ಘಾಟನೆಯನ್ನು 31 ಆಗಸ್ಟ್ 2026 ನೇ ಸೋಮವಾರ ಬೆಳಗ್ಗೆ 10 ಕ್ಕೆ ಸರಿಯಾಗಿ ಹಮ್ಮಿಕೊಳ್ಳಲಾಗಿದೆ. ವಿವೇಕಾನಂದ ಪದವಿಪೂರ್ವಕಾಲೇಜಿನ ಸ್ಮಾರ್ಟ್‍ಕ್ಯಾಂಪಸ್ ಪರಿಕಲ್ಪನೆಯ ಭಾಗವಾಗಿ ಸುಸಜ್ಜಿತ ಕಂಪ್ಯೂಟರ್‍ ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್‍ರೂಮ್‍ಗಳನ್ನು ನಿರ್ಮಿಸಲಾಗಿದೆ. ಆಧುನಿಕತಂತ್ರಜ್ಞಾನ ಬಳಕೆಯೊಂದಿಗೆ ಪರಿಣಾಮಕಾರಿ ಬೋಧನೆಯದೃಷ್ಟಿಯಲ್ಲಿ ನಿರ್ಮಿಸಲಾದ ಸ್ಮಾರ್ಟ್ ಕ್ಲಾಸರೂಮ್‍ಗಳು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲಿದೆ. ರಾಷ್ಟ್ರಮಟ್ಟದ ಪರೀಕ್ಷೆಗಳಾದ ಜೆಇಇ ಹಾಗೂ ನೀಟ್ ಪ್ರಸ್ತುತಕಂಪ್ಯೂಟರ್ ಬೇಸ್ಡ್‍ಟೆಸ್ಟ್ (ಸಿ.ಬಿ.ಟಿ.) ಮಾಧ್ಯಮದಲ್ಲಿ ನಡೆಯುವುದರಿಂದ ಈ ಪರೀಕ್ಷೆಯತಯಾರಿಗಾಗಿ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆಎದುರಿಸಲು ಸುಸಜ್ಜಿತ ಸಾಫ್ಟ್‍ವೇರ್ ವ್ಯವಸ್ಥೆಯನ್ನು ನೂತನಕಂಪ್ಯೂಟರ್ ಪ್ರಯೋಗಾಲಯ ಒಳಗೊಂಡಿದೆ. ಏಕಕಾಲದಲ್ಲಿ ನೂರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಅಥವಾ ತರಗತಿಗಳನ್ನು ಈ ಪ್ರಯೋಗಾಲಯಗಳಲ್ಲಿ ನಡೆಸಬಹುದಾಗಿದೆ. 


ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಅಧ್ಯಕ್ಷರಾದ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರು ನೂತನ ಕಂಪ್ಯೂಟರ್‍ ಪ್ರಯೋಗಾಲಯದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ ಹಾಗೂ ಪುತ್ತೂರಿನ ದಿ ವೆಬ್ ಪೀಪಲ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಹಸಂಸ್ಥಾಪಕರಾದ ಶರತ್ ಶ್ರೀನಿವಾಸ್‍ಅವರು ನೂತನ ಸ್ಮಾರ್ಟ್ ಕ್ಲಾಸ್‍ಗಳ ಉದ್ಘಾಟನೆಯನ್ನು ನಡೆಸಿಕೊಡಲಿದ್ದಾರೆ. ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ  ರವೀಂದ್ರ ಪಿ. ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.


ಈ ಕಾರ್ಯಕ್ರಮದಲ್ಲಿಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top