ಉಡುಪಿ: ಕೃಷ್ಣ ಜನ್ಮಾಷ್ಟಮಿ ಪೂರ್ವಭಾವಿಯಾಗಿ ಕೃಷ್ಣ ಮಠದಲ್ಲಿ ಭಾನುವಾರ ನಡೆದ ಮೊಸರು ಕಡೆಯುವ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಶಂಖ ಊದುವ ಸ್ಪರ್ಧೆ ಮಧ್ವ ಮಂಟಪದಲ್ಲಿ ನಡೆಯಿತು.
ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತು ಹೈ ಸ್ಕೂಲ್ ಹಾಗೂ ಕಾಲೇಜ್ ವಿಭಾಗಕ್ಕೆ ರಾಜಾಂಗಣದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.
ಶ್ರೀ ಆನಂದ ತೀರ್ಥ ಉಪಾಧ್ಯ, ಶ್ರೀ ರಾಧೇಶ್ ಆಚಾರ್ಯ, ಶ್ರೀ ಅಶ್ವಥ್ ಭಾರದ್ವಾಜ್ ರಸ ಪ್ರಶ್ನೆ ನಡೆಸಿಕೊಟ್ಟರು. ಸ್ಪರ್ಧೆಗಳ ಸಂಚಾಲಕರಾದ ಶ್ರೀ ವಿಷ್ಣು ಪ್ರಸಾದ್ ಪಾಡಿಗಾರ್ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

